ಸಿನಿಮಾ ಒಂದು ಸುಂದರ ಕಾವ್ಯ. ಈ ಕಾವ್ಯದ ರಚನೆಗೆ ಕವಿಯೇ ಬೇಕು..ಆತನಿಗೆ ಕವಿಯ ಅಂತರಾಳದ ಸೌಂದರ್ಯ ಬೇಕು..ಅಂತಹ ಕವಿ-ಕಾವ್ಯಗಳ ಪರಿಶ್ರಮವೇ ಈ ನನ್ನ ಮಂಜಿನ ಹಾದಿ..!ಸಿನಿಮಾ ಆಸಕ್ತರಿಗಾಗಿ, ವಿದ್ಯಾರ್ಥಿಗಳಿಗಾಗಿ.. ಶುಭವಾಗಲಿ...
Wednesday, 20 March 2013
ಮಂಜಿನ ಹಾದಿಯಲಿ ಪಯಣ..!
ನಮ್ಮ ಹುಡುಕಾಟಗಳೇ ಹಾಗೆ.. ಇದಲ್ಲ ಅದು ಅದಲ್ಲ ಇದು..ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೋ ತಳ್ಳಿದ್ದಾಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ..ಇದು ನನ್ನದಲ್ಲ ಎಂದು ಗೊಣಗುತ್ತಾ ಮತ್ಯಾವುದನ್ನೊ ಹುಡುಕುತ್ತಾ ಹೊಗುವುದು..ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೆ ಬಾಳಬೇಕಾಗಿ ಬರುವುದು.. ನಾನೂ ಹಾಗೆ..ಎಲ್ಲರ ಹಾಗೆ. ನನ್ನದಲ್ಲದ ಲೋಕದಲ್ಲಿ, ನಾಲ್ಕು ಗೊಡೆಗಳ ಮದ್ಯೆ, ಕಂಪ್ಯೂಟರ್ ಎದುರುಗಡೆ ನಿರಾಸಕ್ತಿಯಿಂದ ಕುಳಿತು, ಯಾರದೊ ಮೇಲಿನ ಕೊಪಕ್ಕೆ ಕೀಬೋರ್ಡ್ ಕುಟ್ಟುತ್ತಾ ತಿಂಗಳ ಸಂಬಳಕ್ಕೆ ದುಡಿದು ಜೀವನ ಕಳೆಯೊದು ಸಾದ್ಯವಿಲ್ಲದ ಮಾತು. ಇಂದಿನಿಂದ ನನ್ನ ಆಸಕ್ತಿಗಳಿಗೆ ಗುಬ್ಬಚ್ಚಿ ಗುಡು ಕಟ್ಟುವ ಬಯಕೆಯಾಗಿದೆ..ನನ್ನೊಂದಿಗೆ ಕೈಜೊಡಿಸಿ. ಈ ಮಂಜಿನ ಹಾದಿಯ ಪಯಣಿಗರಾಗಿ..
ಇಂತೀ ನನಸಾಗ ಬಯಸುವವಳು
ರಾಧಿಕಾ ಭಟ್
Subscribe to:
Post Comments (Atom)
No comments:
Post a Comment