Friday 22 March 2013

ಹಾರರ್ ಹತ್ತು...ಇದು ಭಯಾನಕ ಲೋಕ..

ಚಲನಚಿತ್ರದ ನಿರ್ಮಾಣ ಆರಂಭವಾದಾಗಿನಿಂದ ಅಸಂಖ್ಯ ಚಿತ್ರಗಳು ಬಿಡುಗಡೆಯಾಗಿವೆ... ಅದೆಷ್ಟೋ ಚಿತ್ರಗಳು ರಿಲೀಸ್ ಆಗ್ದೇ ಹಾಗೇ ಧೂಳು ಹಿಡೀತಿವೆ.ದಶಕಗಳ ಹಿಂದೆ ರಿಲೀಸ್ ಆದ ಅನೇಕ ಚಿತ್ರಗಳು ಈಗ್ಲೂ ಮರೆಯದಂತಿವೆ. ಅವುಗಳಲ್ಲಿ ವಿಶ್ವದ ಟಾಪ್ ಟೆನ್ ಸ್ಕೇರಿಯಸ್ಟ್ ಚಿತ್ರಗಳು ಎಂದಿಗೂ ಹೆದರಿಕೆ ಹುಟ್ಟಿಸುವಂಥದ್ದಿವೆ.ಆ ರೀತಿಯ ಚಿತ್ರಗಳ ವಿಶೇಷ ಬರಹ ಇದು.೧೯೭೩ರಲ್ಲಿ ರಿಲೀಸ್ ಆದ ದಿ ಎಕ್ಸರ್‍ಸಿಸ್ಟ್ ಚಿತ್ರ ಈಗ ನೋಡಿದ್ರೂ ಹೆದರಿಕೆ ಹುಟ್ಟಿಸತ್ತೆ... ಹಾಗೇನೇ, ೧೯೬೩ರಲ್ಲಿ ತೆರೆಕಂಡ ದಿ ಹಾಂಟಿಂಗ್, ೬೮ರಲ್ಲಿ ರಿಲೀಸ್ ಆದ ರೋಸ್‌ಮೆರಿಸ್ ಬೇಬಿ, ೬೦ರಲ್ಲಿ ಸೆಟ್ಟೇರಿದ ಸೈಕೋ, ೬೧ರ ದಿ ಇನ್ನೊಸೆಂಟ್ಸ್.ಹೀಗೆ ಹಾರರ್ ಚಿತ್ರಗಳ ಪಟ್ಟಿ ದೊಡ್ದೇ ಇದೆ... ಆದ್ರೆ, ಹೆದರಿಕೆ ಹುಟ್ಟಿಸುವಂಥದ್ದು ಈ ಚಿತ್ರಗಳಲ್ಲಿ ಅಂಥದ್ದೇನಿದೆ?ತಿಳ್ಕೊಳೋಣ ಬನ್ನಿ. ದಿ ಎಕ್ಸರ್‍ಸಿಸ್ಟ್ - ೧೯೭೩ ಈವರೆಗೆ ತೆರೆಕಂಡ ಅತ್ಯಂತ ಸ್ಕೇರಿಯಸ್ಟ್ ಚಿತ್ರಗಳಲ್ಲಿ ೧೯೭೩ರಲ್ಲಿ ರಿಲೀಸ್ ಆದ ದಿ ಎಕ್ಸರ್‍ಸಿಸ್ಟ್ ಈಗ್ಲೂ ಟಾಪ್ ಒನ್ ಸ್ಥಾನದಲ್ಲಿದೆ. ಇದಕ್ಕೆ ಸ್ಕೇರಿಯಸ್ಟ್ ಮೂವೀ ಆಫ್ ಆಲ್ ಟೈಂ ಎಂಬ ಖ್ಯಾತಿ ಕೂಡ ಇದೆ. ಇದು ಇರಾಖ್‌ನಲ್ಲಿ ನಡೆದ ಭೂತದ ಸತ್ಯಕತೆ ಎಂದೂ ಹೇಳಲಾಗತ್ತೆ.ಒಂದು ಪುಟ್ಟ ಹುಡುಗಿಯ ಮೈಯಲ್ಲಿ ಸೇರಿಕೊಂಡು ಆಕೆಗೆ ತೀವ್ರ ತೊಂದರೆ ನೀಡೋ ಭೂತ ಬಿಡಿಸುವ ಕತೆ ಇದಾಗಿದೆ. ವಿಲಿಯಂ ಪೀಟರ್ ಬ್ಲಾಟಿಯ ಕಾದಂಬರಿ ಆಧಾರಿತ ಈ ಚಿತ್ರ, ಕೊನೆಯವರೆಗೂ ಸಸ್ಪೆನ್ಸ್ ಕಾಪಾಡಿಕೊಂಡು ಹೋಗಿದೆ... ೬೦ರ ದಶಕದಲ್ಲೇ ಈ ಚಿತ್ರದಲ್ಲಿ ವಿಶೇಷ ಎಫೆಕ್ಟ್ಸ್ ಬಳಸಲಾಗಿದೆ. ದಿ ಹಾಂಟಿಂಗ್ - ೧೯೬೩ ಡಾಕ್ಟರ್ ಮಾರ್ಕ್‌ವೇ ಎಂಬಾತ ಭೂತಗಳ ಅಸ್ತಿತ್ವದ ಕುರಿತು ಸಂಶೋಧನೆ ನಡೆಸ್ತಿರ್‍ತಾನೆ.ಸುಮಾರು ೯೦ ವರ್ಷ ಹಳೆಯ ಗುಡ್ಡದ ಮೇಲಿನ ಮನೆಯೊಂದರಲ್ಲಿ ಭೂತದ ಕಾಟದಿಂದ ಅನೇಕರು ಸತ್ತಿರ್‍ತಾರೆ. ಆ ಮನೆ ನೋಡಿದ್ರೇನೇ ಎಂಥವ್ರಿಗೂ ಹೆದರಿಕೆ ಉಂಟಾಗತ್ತೆ. ಆ ಮನೆಯಲ್ಲಿನ ವಿಚಿತ್ರ ಬೆಳವಣಿಗೆಗಳ ಕುರಿತ ಚಿತ್ರದಿ ಹಾಂಟಿಂಗ್.ಇದು ರಿಲೀಸ್ ಆಗಿದ್ದು ೧೯೬೩ರಲ್ಲಿ.ಇದು ೨ನೇ ಸ್ಕೇರಿಯಸ್ಟ್ ಚಿತ್ರ. ಜಾಕೋಬ್ಸ್ ಲ್ಯಾಡರ್ - ೧೯೯೦ ೧೯೯೦ರಲ್ಲಿ ರಿಲೀಸ್ ಆದ ಜಾಕೋಬ್ಸ್ ಲ್ಯಾಡರ್ ಚಿತ್ರ ಸ್ಕೇರಿಯಸ್ಟ್ ಚಿತ್ರಗಳ ಟಾಪ್ ಟೆನ್ ಲಿಸ್ಟ್‌ನಲ್ಲಿ ೩ನೇ ಸ್ಥಾನದಲ್ಲಿದೆ. ಜಾಕೋಬ್ ಸಿಂಗರ್ ಹೆಸರಿನ ಯೋಧ ವಿಯೇಟ್ನಾಂ ಯುದ್ಧಕ್ಕೆ ಹೋದಾಗ ನಡೆದ ಘಟನೆ ಆಧಾರಿತ ಚಿತ್ರವಿದು... ಯುದ್ಧದ ವೇಳೆ ಜಾಕೋಬ್ ಹಾಗೂ ಇತರೆ ಅಮೆರಿಕಾದ ಸೈನಿಕರೊಂದಿಗಾದ ವಿಚಿತ್ರ ಅನುಭವದ ಕತೆಯಾಧಾರಿತ ಚಿತ್ರ ಈ ಜಾಕೋಬ್ಸ್ ಲ್ಯಾಡರ್. ಪೋಲ್ಟರ್‌ಜೀಸ್ಟ್ - ೧೯೮೦ ಈವರೆಗೆ ನಿರ್ಮಾಣವಾದ ಭೂತಗಳ ಆಧಾರಿತ ಚಿತ್ರಗಳಲ್ಲಿ ಪೋಲ್ಟರ್‌ಜೀಸ್ಟ್ ಚಿತ್ರವನ್ನ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಅಂತಾನೇ ಪರಿಗಣಿಸಲಾಗಿದೆ. ಇದು ಟಾಪ್ ಟೆನ್ ಲಿಸ್ಟ್‌ನಲ್ಲಿ ೪ನೇ ಸ್ಥಾಣದಲ್ಲಿದೆ. ಎಲ್ಲವೂ ನಾರ್ಮಲ್ ಆಗೇ ಇರತ್ತೆ... ಆಕ್ಚ್ಯುಯಲ್ ಆದ ಅಂದ್ರೆ ಭೂತದ ಕತೆ ಆರಂಭವಾಗೋದು, ೫ ವರ್ಷದ ಬಾಲಕು ಕಾಣೆಯಾದ ಬಳಿಕ... ಬಾಳಕಿಯ ಪೋಷಕರು ಎಲ್ಲಿ ಹುಡುಕಿದ್ರೂ ಸಿಗದಿದ್ದಾಗ, ಸೈಕಾಲಜಿಸ್ಟ್ ಬಳಿ ಹೋಗ್ತಾರೆ. ಆತ ಬಾಲಕಿ ಎಲ್ಲಿಗೆ ಹೋಗಿದಾಳೆ... ಕಾಣೆಯಾಗಲು ಕಾರಣವೇನು ಎಂಬುದರ ಕುರಿತು ಹೇಳ್ತಾನೆ. ಆತ ಹೇಳ್ತಾನೆ, `ನಿಮ್ಮ ಪಾಲಿಗೆ ಕಾಣೆಯಾಗಿರೋದು ನಿಮ್ಮ ಮಗಳು, ಒಂದು ಬಾಲಕಿ ಅಷ್ಟೆ... ಆದ್ರೆ ನನ್ನ ಪಾಲಿಗೆ ಇದೊಂದು ಭೂತ'... ದಿ ಸಿಕ್ಸ್ತ್ ಸೆನ್ಸ್ - ೧೯೯೯ ಚಿತ್ರದ ಹೆಸ್ರೇ ಹೇಳುವಂತೆ ಇದು ನಮ್ಮಲ್ಲಿನ ಸಿಕ್ಸ್ತ್ ಸೆನ್ಸ್ ಕುರಿತ ಕತೆ... ಆದ್ರೆ, ಇದು ನಾರ್ಮಲ್ ಆಗಿರೋ ಸಿಕ್ಸ್ತ್ ಸೆನ್ಸ್‌ಗಿಂತ ಸ್ವಲ್ಪ ಭಿನ್ನವಾಗಿದೆ. ಇಎದ್ರಲ್ಲಿ ಒಬ್ಬ ಬಾಲಕ, ಮೃತ ವ್ಯಕ್ತಿಗಳನ್ನೆಲ್ಲಾ ನೋಡ್ತಾನೆ... ಆತನ ಸುತ್ತಲೂ ಸತ್ತ ವ್ಯಕ್ತಿಗಳೇ ಕಾಣ್ತಿರ್‍ತಾರೆ... ಅಲ್ಲದೇ, ಮುಂದೆ ಆಗೋದೆಲ್ಲಾ ಈತನಿಗೆ ಗೊತ್ತಾಗತ್ತೆ... ಅದೂ ದೆವ್ವ ಅಥವಾ ಆತ್ಮಗಳ ಕುರಿತು ಮಾತ್ರ... ರೋಸ್‌ಮೇರಿಸ್ ಬೇಬಿ - ೧೯೬೮ ಈ ಚಿತ್ರವನ್ನ ೧೯೬೮ರಲ್ಲಿ ರೋಮನ್ ಪೊಲಾನ್ಸ್ಕಿ ತೆಗೆದ ಚಿತ್ರ... ಈ ಚಿತ್ರ ಎಷ್ಟು ಭಯಾನಕವಾಗಿದೆಯೋ ಅಷ್ಟೇ ತಮಾಷೆಯಾಗಿಯೂ ಇದೆ... ಈ ಚಿತ್ರದ ಪ್ರಮುಖ ಕ್ಯಾರೆಕ್ಟರ್ ರೋಸ್‌ಮೆರಿ, ತನಗೇ ಗೊತ್ತಿಲ್ಲದೇ ಒಂದು ದೆವ್ವದ ತಾಯಿಯಾಗಿಬಿಡ್ತಾಳೆ... ಅಲ್ಲದೇ, ತುಂಬಾ ಆಶ್ಚರ್ಯಕರ ಅನ್ಸೋದು ವಯಸ್ಸಾದ, ನಗ್ನರಾಗಿರೋ ರಾಕ್ಷಸನ ಆರಾಧಕರು... ಇದು ಟಾಪ್ ಟೆನ್‌ನ ೬ನೇ ಸ್ಥಾನದಲ್ಲಿದೆ. ದಿ ಒಮನ್ - ೧೯೭೬ ೧೯೭೬ರಲ್ಲಿ ರಿಲೀಸ್ ಆದ ದಿ ಒಮನ್ ನಿರ್ದೇಶಿಸಿದ್ದು ರಿಚರ್ಡ್ ಡಾನರ್... ಇದು ಅಷ್ಟೊಂದು ಹೆದರಿಕೆ ಹುಟ್ಟಿಸಲ್ಲವಾದ್ರೂ, ಟಾಪ್ ಟೆನ್ ಲಿಸ್ಟ್‌ನಲ್ಲಿ ೮ ನೇ ಸ್ಥಾನದಲ್ಲಿದೆ... ಈ ಎಲ್ಲ ಚಿತ್ರಗಳಿಗೆ ಸತ್ಯಕತೆಗಳೇ ಆಧಾರವಾಗಿವೆ... ಸತ್ಯಕತೆಗಳನ್ನ ಆಧಾರವಾಗಿಟ್ಟುಕೊಂಡೇ ಈ ಚಿತ್ರಗಳನ್ನ ಚಿತ್ರೀಕರಿಸಲಾಗಿದೆ... ಅದೇ ಕಾರಣಕ್ಕೆ ಇಂದಿನವರೆಗೂ ಈ ಚಿತ್ರಗಳು, ಅಲ್ಟಿಮೇಟ್ ಆಗಿಯೇ ಉಳಿದಿವೆ... ದಿ ಇನ್ನೊಸೆಂಟ್ಸ್ - ೧೯೬೧ ಇದು ಹೆನ್ರಿ ಜೇಮ್ಸ್ ಬರೆದ ಕಾದಂಬರಿ ದಿ ಟರ್ನ್ ಆಫ್ ದಿ ಸ್ಕ್ರಿವ್ ಆಧಾರಿತ ಚಿತ್ರ... ಭೂತಕ್ಕೆ ಸಂಬಂಧಿಸಿದ ಈ ಚಿತ್ರ ತುಂಬಾ ಥ್ರಿಲ್ಲಿಂಗ್ ಆಗಿದೆ... ಒಂದು ಮನೆ.... ಮನೆ೩ಯಲ್ಲಿ ಇಬ್ಬರು ಅನಾಥ ಮಕ್ಕಳು... ಆ ಮಕ್ಕಳನ್ನ ನೋಡ್ಕೊಳೋಕ್ಕೆ ಒಂದು ಮಹಿಳೆ... ಈ ಮನೆಯಲ್ಲಿ ಮಹಿಳೆಗೆ ದೆವ್ವಗಳು ಕಾಣಲಾರಂಭಿಸುತ್ವೆ... ಅಷ್ಟೇ ಅಲ್ಲ, ಈ ಮನೆಯಲ್ಲಿ ದೇವ್ವಗಳು ಹೇಗೆ ಸೇರ್‍ಕೊಂಡ್ವು ಎಡಲ್ಲವನ್ನೂ ಆಕೆ ತಿಳ್ಕೋತಾಳೆ... ಅಲ್ಲದೇ ಆ ಭೂತಗಳು ಮಕ್ಕಳಿಗೆ ತೊಂದರೆ ನೀಡಲು ನಿರ್ಧರಿಸೋದೂ ಆಕೆಗೆ ಗೊತ್ತಾಗತ್ತೆ... ಆಗ, ದೆವ್ವಗಳ ವಿರುದ್ಧದ ಮಹಿಳೆಯ ಹೋರಾಟ, ದಿ ಇನ್ನೊಸೆಂಟ್ಸ್... ಸೈಕೋ - ೧೯೬೦ ಇದು ಕನ್ನಡದ ಸೈಕೋ ಅಲ್ಲ... ೧೯೯೮ರಲ್ಲಿ ತೆರೆಕಂಡ ಸೈಕೋನೂ ಅಲ್ಲ. ಇದು ೧೯೬೦ರಲ್ಲಿ ರಿಲೀಸ್ ಆದ ಬ್ಲ್ಯಾಕ್ ಎನ್ ವ್ಹೈಟ್ ಚಿತ್ರ... ಆದ್ರೂ ಈ ಚಿತ್ರದ ನಿರ್ದೇಶನ, ಛಾಯಾಗ್ರಹಣ ಅದ್ಭುತವಾಗಿದೆ... ಜೊತೆಗೆ ಸೈಕಿಕ್ ಬಾಲಕನ ನಟನೆ ಕೂಡ ಮೈ ಝುಮ್ಮ್ ಅನಿಸತ್ತೆ... ಹೇಳಿಕೊಳ್ಳುವಂತಹ ಸ್ಪೆಷಲ್ ಎಫೆಕ್ಟ್ಸ್ ಈ ಚಿತ್ರದಲ್ಲಿ ಬಳಸಿಲ್ಲವಾದ್ರೂ, ಚಿತ್ರಕತೆ, ನಟನೆ ನೋಡುಗನನ್ನ ಹಿಡಿದಿಡುತ್ತದೆ... ದಿ ಶೈನಿಂಗ್ - ೧೯೮೦ ದಿ ಶೈನಿಂಗ್, ಅ ಮಾಸ್ಟರ್ ಪೀಸ್ ಆಫ್ ಮಾಡ್ರನ್ ಹಾರರ್... ೧೯೮೦ರಲ್ಲಿ ರಿಲೀಸ್ ಆದ ದಿ ಶೈನಿಂಗ್ ಸೈಕಲಾಜಿಕಲ್ ಹಾರರ್ ಚಿತ್ರ... ಒಬ್ಬ ಬರಹಗಾರ, ಆತನಿಗೊಬ್ಬ ಮಗ, ಹಿಂದೆ ನಡೆದ್ದು, ಮುಂದೆ ನಡೆಯೋದು ಎರಡನ್ನೂ ನೋಡೋ ಶಕ್ತಿ ಈ ಬರಹಗಾರನ ಮಗನಿಗಿರತ್ತೆ... ವಿಶೇಷ ಅಂದ್ರೆ, ಈತ ತಂಗಿರೋ ಹೊಟೆಲ್‌ನಲ್ಲಿ ಭೂತಗಳು ಓಡಾಡೋದನ್ನ ಮೊದಲೇ ನೋಡ್ತಾನೆ. ಈತನ ವಿಶೇಷ ಶಕ್ತಿಯಿಂದ ಬರಹಗಾರ ಅಪ್ಪ ಇಂಪ್ರೆಸ್ ಆಗ್ತಾನೆ... ಆದ್ರೆ ಬರಹಗಾರ ಅಪ್ಪ ತನ್ನ ಮಗನ ಕ್ಯಾರೆಕ್ಟರ್ ಮೇಲೆ ಎಷ್ಟೊಂದು ಇಂಪ್ರೆಸ್ ಆಗ್ತಾನೆ ಅಂದ್ರೆ, ಹುಚ್ಚನಾಗಿ ತನ್ನ ಪತ್ನಿ ಹಾಗೂ ಪುತ್ರನನ್ನೇ ಕೊಲ್ಲುವ ಯತ್ನ ಮಾಡ್ತಾನೆ... ದಿ ಶೈನಿಂಗ್ ಚಿತ್ರ ಒಂದ್ ಕಡೆ ಬರಹಗಾರನ ಪುತ್ರ ನೋಡೋ ದೆವ್ವಗಳಿಂದಾಗಿ, ಅವುಗಳ ಓಡಾಟದಿಂದಾಗಿ, ಹೆದರಿಕೆ ಹುಟ್ಟಿಸತ್ತೆ... ಇನ್ನೊಂದೆಡೆ, ತನ್ನ ಪುತ್ರನಲ್ಲಿನ ದೆವ್ವಗಳನ್ನ ನೋಡೋ ಕ್ಯಾರೆಕ್ಟರ್‌ನಿಂದಾಗಿ ಬರಹಗಾರ ಅಪ್ಪ ಅರೆಹುಚ್ಚನಾಗೋದು... ಅಥವಾ ದೆವ್ವಗಳ ಪ್ರಭಾವಕ್ಕೊಳಗಾಗೋದು... ಹೀಗೆ ಹಾರರ್ ಜೊತೆಗೆ ಸೈಕಲಾಜಿಕಲ್ ಚಿತ್ರ ಇದಾಗಿದೆ... ಇವು, ಈವರೆಗೆ ವಿಶ್ವಾದ್ಯಂತ ರಿಲೀಸ್ ಆಗಿರೋ ದೆವ್ವ, ಭೂತಗಳಿಗೆ ಸಂಬಂಧಿಸಿದ ಹಾರರ್, ಸ್ಕೇರಿ ಚಿತ್ರಗಳಲ್ಲಿ ಟಾಪ್ ೧೦ ಚಿತ್ರಗಳು... ದುರಂತ ಅಂದ್ರೆ, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಚಿತ್ರಗಳು ತೀರಾ ಕಡಿಮೆಯಾಗಿವೆ... ಬೆರಳೆಣಿಕೆಯಷ್ಟು ಹಾರರ್ ಚಿತ್ರಗಳು ನಿರ್ಮಾಣವಾಗ್ತಾವೆಯಾದ್ರೂ ಹಿಟ್ ಆಗಲ್ಲ... ಹಿಟ್ ಆಗೋವಷ್ಟು ಒಳ್ಳೆಯ ಕತೆ ಅದ್ರಲ್ಲಿರಲ್ಲ... ಹಾಗಾಗಿಯೇ, ಈಗ್ಲೂ ಟಾಪ್ ಟೆನ್ ಸ್ಕೇರಿಯಸ್ಟ್ ಚಿತ್ರಗಳ ಪಟ್ಟಿಯಲ್ಲಿ ತುಂಬಾ ಹಳೆಯ ಚಿತ್ರಗಳೇ ಇರೋದು...

No comments:

Post a Comment