Sunday 24 March 2013

ಹಾಸ್ಯಕ್ಕೂ ಹಿಸ್ಟ್ರಿ..!

ನವರಸಗಳಲ್ಲಿ ಒಂದಾದ ಈ ಹಾಸ್ಯ ಸಿನಿಮಾರಂಗದಲ್ಲಿ ಹಿಂದಿನಿಂದಲೂ ಬಳಕೆಯಾಗುತ್ತಾ ಬಂದಿದೆ.ಹಾಸ್ಯ ಸಿನಿಮಾದ ಇತಿಹಾಸ ಹುಡುಕುತ್ತಾ ಹೋದರೆ ನಾವು ಸಿನಿಮಾದ ಆರಂಭದ ಹಂತಕ್ಕೆ ಹೋಗಬೇಕು. ಆಗಿನ ಮೂಕಿ ಚಿತ್ರಗಳಲ್ಲಿ ಯಥೇಚ್ಚವಾಗಿ ಕಂಡುಬರುತ್ತಿದ್ದುದು ಈ ಹಾಸ್ಯ ರಸವೆಂಬ ಮಂತ್ರ. ಇನ್ನೂ ನಿರ್ದಿಷ್ಟವಾಗಿ ಅಂಕಿ ಸಂಕಿಗಳೊಂದಿಗೆ ಹೇಳಬೇಕಾದರೆ.., ೧೮೯೫-೧೯೩೦: ೧೮೯೫-೧೯೩೦ ರ ಹೊತ್ತಿಗೆ ಹಾಸ್ಯ ಸಿನಿಮಾಗಳು ಮೂಡಿಬಂದವು. ಸಿನಿಮಾ ಎಂಬ ಬಣ್ನದ ಲೋಕ ಪರಿಚಯವಾಗಿದ್ದೂ ಇದೇ ಸಮಯದಲ್ಲಿ. ಮೊದಲಿಗೆ ಮೂಡಿ ಬರುತ್ತಿದ್ದ ಮೂಕಿ ಸಿನಿಮಾಗಳಲ್ಲಿ ಹಾಸ್ಯ ರಸದ ಬಳಕೆ ಯಥೇಚ್ಛವಾಗಿ ನಡೆದಿದೆ. ೧೮೯೫ರಲ್ಲಿ ಮೂಡಿಬಂದ ವಾಟರಿಂಕ್ ದಿ ಗಾರ್ಡನರ್ ಎಂಬ ಸಿನಿಮಾದಲ್ಲಿ ತೋಟದ ಮಾಲಿಯಾದ ನಾಯಕ ನಟ ತನ್ನ ಹಾವಬಾವಗಳಿಂದ ಯಾವುದೇ ಮಾತಿಲ್ಲದೆ ಪ್ರೇಕ್ಷಕನ ಮನ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದ. ಚಲನಚಿತ್ರದಲ್ಲಿ ಹಾಸ್ಯ ಯಶಸ್ವಿ ಆಗಬಹುದೆಂಬ ಯೋಚನೆ ಮೂಡಿದ್ದು ಆಗಲೆ. ನಂತರ ಸತತವಾಗಿ ಮೂಡಿ ಬಂದ ಚಾರ್ಲಿ ಚಾಪ್ಲೀನ್‌ರ ಸಿನಿಮಾಗಳು ನೋಡುಗನ ಮನ ಸೆಳೆದಿಡಲು ಸಿನಿಮಾದಲ್ಲಿ ಹಾಸ್ಯದ ಬಳಕೆ ಅತಿ ಮುಖ್ಯ ಎಂಬ ಮಾತಿಗೆ ಪುಷ್ಟಿ ನೀಡಿದವು. ಪ್ರೇಕ್ಷಕನ ಮನದಲ್ಲಿ ಚಾರ್ಲಿ ಚಾಪ್ಲಿನ್ ಎಂಬ ಹಾಸ್ಯ ನಟ ಅಚ್ಚಾಗಿ ಹೋಗಿದ್ದೂ ಆವಾಗಲೆ. ಅದೇ ಸಮಯದಲ್ಲಿ ಮ್ಯಾಕ್ಸ್ ಲಿಂಡರ್ ಎಂಬ ಹಾಸ್ಯ ನಟ ಕೂಡ ಪ್ರಸಿದ್ದಿ ಹೊಂದಿದ್ದ. ನಂತರದ ದಿನಗಳಲ್ಲಿ ಅಂದರೆ ೧೯೨೦ ಅಂಚಿನಲ್ಲಿ ಆನಿಮೇಟೆಡ್ ಕಾರ್ಟೂನ್‌ಗಳನ್ನು ಬಳಸಿ ನಿರ್ಮಿಸಿದ ಹಾಸ್ಯ ಸಿನಿಮಾಗಳು ಯಶಸ್ವಿಯಾಗಿ ತೆರೆಕಂಡವು.. ಉದಾಹರಣೆಗೆ ಮಿಕ್ಕಿ ಮೌಸ್, ಫೆಲಿಕ್ಸ್ ದಿ ಕ್ಯಾಟ್, ಟಾಮ್ ಆಂಡ್ ಜೆರ್ರಿ ಮುಂತಾದುವು. ೧೯೩೦-೧೯೫೦: ೧೯೨೦ ಕೊನೆಯಲ್ಲಿ ಮೂಖವಾಗಿದ್ದ ಸಿನಿಮಾಗಳಿಗೆ ಹುಟ್ಟಿಕೊಂಡ ದ್ವನಿ ಹಾಸ್ಯದ ಮೌನ ಸಾಮ್ರಜ್ಯಕ್ಕೆ ತೆರೆ ಎಳೆದು ಸದ್ದಿನ ಗದ್ದಲವೆಬ್ಬಿಸಿತ್ತು. ಮುಂದುವರಿದ ತಾಂತ್ರಿಕತೆಯಿಂದ ಸಿನಿಮಾಗಳಲ್ಲಿ ದ್ವನಿ ಅಳವಡಿಕೆನ್ನು ಮಾಡಲಾಯಿತು. ಇದರಿಂದ ಅಭಿನಯದ ಜೊತೆಗೆ ಸಂಬಾಷಣೆಯ ಬಳಕೆಯಾಗಿ ಸಿನಿಮಾದ ವಸ್ತು ಮತ್ತಷ್ಟು ಗಟ್ಟಿಯಾಗುವಲ್ಲಿ ಯಶಸ್ವಿಯಾಯಿತು. ಡಬ್ಲ್ಯು. ಸಿ. ಫೀಲ್ಡ್ಸ್, ಮಾರ್ಕ್ಸ ಬ್ರದರ್‍ಸ್, ಸ್ಟಾನ್ ಲಾರೆಲ್ ಮುಂತಾದ ನಿರ್ದೆಶಕರು ಅನೇಕ ಹಾಸ್ಯ ಸಿನಿಮಾಗಳನ್ನು ನಿರ್ದೇಶಿಸಿದರು. ಸಿನಿಮಾದಲ್ಲಿ ಅವರು ಬಳಸಿದ ಹಿನ್ನೆಲೆ ಸಂಗೀತ, ಸಂಭಾಷಣೆ,ಸುಸಜ್ಜಿತವಾದ ಸಿನಿಪರದೆಗಳು, ಸಂಪೂರ್ಣ ಸಿನಿಮಾ ನಿರ್ದೇಶನಗಳು ಆಗಿನ ಕಾಲಕ್ಕೆ ಅತ್ಯುತ್ತಮ ಎನ್ನಬಹುದಾದ ಪ್ರಶಂಸೆ ಸಿಕ್ಕಿತ್ತು. ಫ್ರಾಂಕ್ ಕಾಪ್ರಾ ನಿರ್ದೇಶಿಸಿದಂತಾ ಸಿನಿಮಾಗಳು ಹಾಸ್ಯ ಸಿನಿಮಾಗಳಾಗಿದ್ದರೂ ಕೂಡ ಅವುಗಳಲ್ಲಿ ಹಾಸ್ಯದ ಜೊತೆಗೆ ಜನ ಜೀವನದ ರೀತಿ ನೀತಿಗಳು ಜಂಜಾಟಗಳನ್ನು ಬಿಂಬಿಸುವುದರೊಂದಿಗೆ ಆಶಾಭಾವನೆಯನ್ನು ಮೂಡಿಸುವತ್ತ ಚಿಂತನೆ ಹಚ್ಚಿದ್ದು ಮುಂದಿನ ಸಿನಿಮಾಗಳಿಗೆ ಆದರ್ಶವಾದುವು. ೧೯೩೦ರ ಹೊತ್ತಿಗೆ ಕೊಲಂಬಿಯಾ ೧೯೦ ಸಿನಿಮಾಗಳನ್ನು ನಿರ್ದೆಶಿಸಿ ಸಿನಿಮಾ ಹಾದಿಯನ್ನು ಮತ್ತಷ್ಟು ಸುಂದರವಾಗಿಸಿತ್ತು. ನಂತರದ ದಿನಗಳಲ್ಲಿ ಸಿನಿಮಾ ಸ್ಟುಡಿಯೋಗಳ ನಿಮಾನವಾಗಿ ಸಿನಿಮಾ ನಿರ್ದೇಶನ ಒಂದು ಪ್ರವೃತ್ತಿ ಮಾತ್ರವಾಗದೆ ವೃತ್ತಿಯಾಗಿಯೂ ಬದಲಾಯಿತು. ಇಂಗ್ಲೇಂಡಿನ ಹಾಸ್ಯ ಸಿನಿಮಾ ಜಗತ್ತು ಅಲ್ಲಿನ ಮ್ಯುಸಿಕ್ ಹಾಲ್(ಸ್ಟುಡಿಯೋ)ಗಳಿಮದ ಬಹಳಷ್ಟು ಪ್ರಭಾವಿತವಾಗಿದ್ದವು. ಮುಂದೆ ೧೯೪೦ರಲ್ಲಿ ಈಲಿಂಗ್ ಸ್ಟುಡಿಯೋಸ್ ನಿರ್ಮಿಸಿದ ಈಲಿಂಗ್ ಕಾಮಿಡೀಸ್ ಸಿನಿಮಾ ಸೀರೀಸ್ ಬಹಳಷ್ಟು ಯಶಸ್ವಿಯನ್ನ ಗಳಿಸಿತು. ಮುಂದೆ ಅನೇಕ ಸಿನಿಮಾಗಳು ಈ ಬ್ಯಾನರ್‌ನ ಅಡಿಯಲ್ಲಿ ರೂಪಿತಗೊಂಡವು. ೨ನೇ ವರ್ಲ್ಡ್ ವಾರ್ ನಂತರ ಹಾಲಿವುಡ್ ಸಿನಿಮಾ ಯುದ್ಧದತ್ತ ಮುಖ ಮಾಡಿತು. ನಂತರದ ದಿನಗಳಲ್ಲಿ ಸಿನಿಮಾ ಕಥಾವಸ್ತುವಿನಲ್ಲಿ ಅನೇಕ ಬದಲಾವಣೆಗಳು ನಡೆದವು. ಹಾಸ್ಯ ಇಗ ಪ್ರಧಾನ ವಸ್ತವಾಗಿ ಉಳಿಯದೆ ಸಿನಿಮಾದ ಒಂದು ಭಾಗವಾಗಿ ಹೋಯಿತು. ಆದರೂ ಅನೇಕ ಹಾಸ್ಯ ಪ್ರಧಾನ ಸಿನಿಮಾಗಳು ಮೂಡಿ ಬಂದಿವೆ . ೧೯೬೦-೮೦ರಲ್ಲಿ ತಾರಾ ವರ್ಚಸ್ಸು ಮೂಡಿಬಂದುದು ಹೊಸ ಬದಲಾವಣೆ. ಹಾಸ್ಯ ಪ್ರಧಾನ ಸಿನಿಮಾಗಳ ಸಂಖ್ಯೆಗಳೂ ಕೂಡ ಈ ಸಮಯದಲ್ಲಿ ಕಡಿಮೆಯಾಗಿ ಹೋದವು. ಆದರೂ ೧೯೬೪-೬೫ರಲ್ಲಿ ಇಟ್ಸ್ ಅ ಮ್ಯಾಡ್,ಮ್ಯಾಡ್ ಮ್ಯಾಡ್ ವರ್ಲ್ಡ್, ದಿ ಗ್ರೇಟ್ ರೇಸ್, ಜೆರ್ರೀ ಲೆವಿಸ್ ದಿ ಪಿಂಕ್ ಪ್ಯಾಂಥರ್ ಎಂಬ ಅನೇಕ ಸಿನಿಮಾಗಲು ಮೂಡಿ ಬಂದವು ಯಶಸ್ಸೂ ಕೂಡ ಗಳಿಸಿದವು. ನಂತರ ಜಾಕಿ ಚಾನ್ ರವರ ಹಾಂಗ್ ಕಾಂಗ್ ಆಕ್ಷನ್ ಸಿನಿಮಾಗಳಂತೆ, ೧೯,೨೦ರ ದಶಕದ ಕ್ಲೂಲೆಸ್ ಹಾಗೂ ಇತ್ತೀಚಿನ ರೊಮ್ಯಾಂಟಿಕ್ ಸಿನಿಮಾಗಳಂತೆ ಹಾಸ್ಯ ಪ್ರಧಾನ ವಸ್ತುವಾಗದೆ ಸಹವಸ್ತುವಾಗಿ ಮಾರ್ಪಾಡಾಯಿತು. ಆದರೂ ಹಾಸ್ಯವಿಲ್ಲದ ಸಿನಿಮಾ ರಸವಿಲ್ಲದ ಕಬ್ಬಿನಂತೆ ಎಂಬ ಮಾತನ್ನು ಎಲ್ಲಾ ಸಿನಿಮಾ ಮಂದಿ ಒಪ್ಪಿಕೊಳ್ಳುತ್ತಾರೆ.

No comments:

Post a Comment