Wednesday 27 March 2013

ಭಾರತೀಯ ಸಿನಿಮಾ ರಂಗ ಬೆಳೆದು ಬಂದ ಬಗೆ...

ಒಂದು ಸಣ್ಣ ಅವಲೋಕನ ಭಾರತೀಯ ಸಿನಿಮಾ ರಂಗ ತನ್ನ ಸಿನಿಮಾದ ಮೂಲಕ ೨೦ನೇಯ ಶತಮಾನದಿಂದಲೂ ವಿಶ್ವ ಸಿನಿಮಾ ರಂಗದ ಮೇಲೆ ಆಳವಾದ ಪ್ರಭಾವ ಬೀರಿದೆ. ಭಾರತೀಯ ಚಲನ ಚಿತ್ರೋದ್ಯಮವು ಭಾರತದಾದ್ಯಂತ ನಿರ್ಮಿಸಲಾದ ಚಲನ ಚಿತ್ರಗಳನ್ನು ಒಳಗೊಮಡಿದೆ. ಭಾರತದ ಮಣ್ಣಿನ ಗುಣವನ್ನು ಹೊಂದಿದ ಭಾರತೀಯ ಸಿನಿಮಾ ಸಂಸ್ಕೃತಿ ವೈವಿಧ್ಯತೆಯ ಆಗರವನ್ನು ಹೊತ್ತು ನೆಲದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಿದೆ. ಆಂದ್ರ ಪ್ರದೇಶ, ಅಸ್ಸಾಂ ಬಿಹಾರ ಗುಜರಾತ್, ಹರಿಯಾಣ, ಜಮ್ಮು ಕರ್ನಾಟಕ ಹೀಗೆ ಎಲ್ಲಾ ರಾಜ್ಯದ ಸಮಸ್ಕೃತಿಗಳು ಸಿನೀಯವಾಗಿ ಮೂಡಿ ಬಂದಿದೆ. ಭಾರತೀಯ ಸಿನಿಮಾ ಹಿಂದಿನಿಂದಲೂ ದಕ್ಷಿಣ ಏಷ್ಯಾ, ಮದ್ಯ ಪ್ರಾಚ್ಯ, ಹಾಗೂ ಹಿಂದಿನ ಸೋವಿಯತ್ ಒಕ್ಕೂಟಗ ಸಂಸ್ಕೃತಿಗಳನ್ನು ಅನುಸರಿಸಿಕೊಂಡು ಬಂದಿದೆ. ಇಂದು ಭಾರತದ ಸಿನಿಮಾಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಇದೆ. ವಿಶ್ವದ ಮೂಲೆ ಮೂಲೆಗಳಲ್ಲಿ ಪ್ರೇಕ್ಷಕರಿದ್ದಾರೆ.. ಅಮಿತಾಬ್ ಕಮಲ್ ಹಾಸನ್‌ನಂತಹ ನಟರಿಗೆ ಅಭಿಮಾನಿಗಳಿದ್ದಾರೆ. ಇಂದು ಸಿನಿಮಾ ಒಂದು ಮನೊರಂಜನೆಯಾಗದೆ ಬಹುಮುಖ್ಯವಾದ ವ್ಯಾಪಾರವಾಗಿ ಕಂಡು ಬಂದಿದೆ. ವಷ್ಕ್ಕೆ ವಿಶ್ವದಲ್ಲಿ ಅತ್ಯಧಿಕ ಬಂಡವಾಳ ಹೂಡಿಕೆಯಾಗುವುದು ಇಲ್ಲೆ. ಒಂದು ಮಾದ್ಯಮವಾಗಿ ಚಲನ ಚಿತ್ರವು ದೇಶದಲ್ಲಿ ಜನಪ್ರಿಯತೆ ಗಲಿಸಿಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ವಾರ್ಷಿಕವಾಗಿ ೧,೦೦೦ದಷ್ಟು ಸಿನಿಮಾಗಳು ನಿಮಾಣಗೊಂಡವು. ಯುನೈತೆಡ್ ಕಿಂಗ್ ಡಮ ಮತ್ತು ಅಮೇರಿಕಾ ಸಮಯುಕ್ತ ಸಂಸ್ಥಾನಗಳಂತ ದೇಶಗಳಲ್ಲಿನ ವಲಸಿಗರು ಹಿಂದಿ ಭಾಷೆಯ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಪ್ರೇಕ್ಷಕರಾಗಿ ತಮ್ಮ ಅಭಿಮಾನವನ್ನು ಮುಂದುವರಿಸಿಕೊಂಡು ಬಂದರು. ಬಾಲಿವುಡ್ ಕುರಿತು ಬ್ರಿಟಾನಿಕಾ ವಿಶ್ವಕೋಶದಲ್ಲಿ ನಮೂದಿಸಿದ ಪ್ರಕಾರ, ಈ ಚಲನಚಿತ್ರಗಳ ಪೈಕಿ ಕೆಲವೊಂದು ಸೂತ್ರನು ಸಾರಿಯಾಗಿರುವ ಕಥೆಯ ಎಳೆಗಳು, ಪರಿಣತಿಯಿಂದ ಸಂಯೋಜಿಸಲ್ಪಟ್ಟ ಹೊಡೆದಾಟದ ದೃಶ್ಯಗಳು, ನಯನ ಮನೋಹರವಾದ ಹಾಡು-ಹಾಗೂ-ನೃತ್ಯದ ವಾಡಿಕೆಯ ಅನುಕ್ರಮಗಳು, ಮತ್ತು ಉತ್ಪ್ರೇಕ್ಷಿತ ಸ್ವರೂಪದಲ್ಲಿರುವ ಕಥಾನಾಯಕರಿಂದ ಜನರನ್ನು ಆಕರ್ಷಿಸುವುದನ್ನು ಮುಂದುವರಿಸಿದವು."ಇದು ವ್ಯಾಪಾರಿ ತಮಿಳು ಚಲನಚಿತ್ರ ಹಾಗೂ ತೆಲುಗು ಚಲನಚಿತ್ರಗಳಿಗೆ ಸಂಬಂಧಿಸಿದಂತೆಯೂ ನಿಜ ಸಂಗತಿಯಾಗಿದೆ. ಮತ್ತೊಂದೆಡೆ, ಬಂಗಾಳಿ ಚಿತ್ರರಂಗ, ಮಲಯಾಳಂ ಚಿತ್ರರಂಗ, ಕನ್ನಡ ಚಿತ್ರರಂಗಗಳಲ್ಲಿ ಹಾಗೂ ತನ್ನ ಗಂಭೀರ ವಿಷಯ, ಯಥಾರ್ಥತೆ ಹಾಗೂ ವಾಸ್ತವಿಕತೆಗಳಿಗಾಗಿ ಚಿರಪರಿಚಿತವಾಗಿರುವ ಇತರ ಪ್ರಾದೇಶಿಕ ಭಾಷಾ ಉದ್ಯಮಗಳಲ್ಲಿ ಎದ್ದು ಕಾಣುವಂತಿರುವ 'ಸಮಾನಾಂತರ ಚಲನಚಿತ್ರ'ದ ಪ್ರವೃತ್ತಿಯ ಬೆಳವಣಿಗೆಯು ಇವಕ್ಕೆ ಹೋಲಿಸಿದಾಗ ವೈಲಕ್ಷಣ್ಯವನ್ನು ತೋರಿಸುತ್ತವೆ. ಸ್ಥೂಲ ಅವಲೋಕನ ೧೯೨೯ರಲ್ಲಿ ಬಂದ ಪ್ರಪಂಚ ಪಾಶ್ ಚಲನಚಿತ್ರದಲ್ಲಿ ಚಾರು ರಾಯ್ ಮತ್ತು ಸೀತಾ ದೇವಿ. ೨೦ನೇ ಶತಮಾನದಲ್ಲಿ, ಅಮೆರಿಕಾದ ಹಾಗೂ ಚೀನಾದ ಚಲನಚಿತ್ರೋದ್ಯಮಗಳ ಜೊತೆಜೊತೆಯಲ್ಲಿಯೇ ಭಾರತೀಯ ಚಿತ್ರರಂಗವು ಒಂದು ಜಾಗತಿಕ ಉದ್ಯಮವಾಗಿ ಮಾರ್ಪಟ್ಟಿತು.ಉತ್ಪನ್ನವನ್ನು ವಿತರಿಸುವಲ್ಲಿ ಬೇರುಬಿಟ್ಟಿದ್ದ ಸಿನಿಮೀಯ ರೂಢಮಾದರಿಯನ್ನು ಸುಧಾರಿಸುವಲ್ಲಿ ವರ್ಧಿಸಲ್ಪಟ್ಟ ತಂತ್ರಜ್ಞಾನವು ದಾರಿಮಾಡಿಕೊಟ್ಟಿತು. ಇದರಿಂದಾಗಿ ವಿಷಯವು ಉದ್ದೇಶಿತ ಪ್ರೇಕ್ಷಕರನ್ನು ತಲುಪುವ ವಿಧಾನದಲ್ಲಿ ಆಮೂಲಾಗ್ರ ಮಾರ್ಪಾಟುಗಳಾದವು.[೪] ಭಾರತದ ಚಲನಚಿತ್ರಗಳು ಪ್ರದರ್ಶನಗೊಳ್ಳುವ ೯೦ಕ್ಕೂ ಹೆಚ್ಚಿನ ದೇಶಗಳಲ್ಲಿ ಭಾರತೀಯ ಚಿತ್ರರಂಗವು ಮಾರುಕಟ್ಟೆಯನ್ನು ಕಂಡುಕೊಂಡಿತು.ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿಯೂ ದೇಶವು ಪಾಲ್ಗೊಂಡಿತು. ಅದರಲ್ಲೂ ವಿಶೇಷವಾಗಿ ಸತ್ಯಜಿತ್ ರೇ (ಬಂಗಾಳಿ), ಅಡೂರ್ ಗೋಪಾಲ ಕೃಷ್ಣನ್, ಷಾಜಿ ಓ. ಕರುಣ್ (ಮಲಯಾಳಂ) ಮೊದಲಾದವರ ಚಿತ್ರಗಳು ಇಲ್ಲಿ ಪ್ರದರ್ಶಿತವಾದವು. ಶೇಖರ್ ಕಪೂರ್, ಮೀರಾ ನಾಯರ್, ದೀಪಾ ಮೆಹ್ತಾ ಇವರೇ ಮೊದಲಾದ ಭಾರತೀಯ ಚಲನಚಿತ್ರ ತಯಾರಕರು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಯಶಸ್ಸನ್ನು ಕಂಡರು. ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಜಪಾನ್ನಂಥ ಹೊರ ದೇಶಗಳಿಗೆ ಚಲನಚಿತ್ರಗಳ ಪ್ರತಿನಿಧಿಗಳ ತಂಡಗಳನ್ನು ಭಾರತದ ಸರ್ಕಾರವು ವಿಸ್ತರಿಸಿದರೆ, ದೇಶದ ಚಲನಚಿತ್ರ ನಿರ್ಮಾಪಕರ ಒಕ್ಕೂಟವು ಇದೇ ರೀತಿಯ ನಿಯೋಗಗಳನ್ನು ಯುರೋಪ್ನಾದ್ಯಂತ ಕಳಿಸಿದವು. ಭಾರತವು ಚಲನಚಿತ್ರಗಳ ವಿಶ್ವದ ಅತಿದೊಡ್ಡ ತಯಾರಕನಾಗಿದ್ದು, ಪ್ರತಿವರ್ಷವೂ ಸರಿಸುಮಾರು ಒಂದು ಸಾವಿರ ಚಲನಚಿತ್ರಗಳನ್ನು ತಯಾರಿಸಿಕೊಂಡು ಬಂದಿದೆ. ಒಟ್ಟಾರೆಯಾಗಿ ತಯಾರಾಗುತ್ತಿರುವ ೬೦೦ ಚಲನಚಿತ್ರಗಳ ಪೈಕಿ, ತಲಾ ೩೦೦ರಷ್ಟು ಚಲನಚಿತ್ರಗಳು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿದ್ದರೆ, ಇನ್ನುಳಿದವು ಇತರ ಭಾಷೆಗಳಲ್ಲಿವೆ. ಆದಾಗ್ಯೂ, ಭಾರತದಲ್ಲಿ ಚಲನಚಿತ್ರಗಳಿಂದ ಉತ್ಪತ್ತಿಯಾಗುತ್ತಿರುವ ಒಟ್ಟಾರೆ ಆದಾಯದ ಪೈಕಿ ಸುಮಾರು ಅರ್ಧದಷ್ಟು ಭಾಗವು ಹಿಂದಿ ಚಲನಚಿತ್ರಗಳಿಂದ ಬರುತ್ತದೆ. ೧೦೦% ವಿದೇಶೀ ನೇರ ಹೂಡಿಕೆಗೆ ಅವಕಾಶ ಕಲ್ಪಿಸಿರುವುದರಿಂದಾಗಿ, ೨೦ತ್ ಸೆಂಚುರಿ ಫಾಕ್ಸ್, ಸೋನಿ ಪಿಕ್ಷರ್ಸ್, ಮತ್ತು ವಾರ್ನರ್ ಬ್ರದರ್ಸ್ನಂಥ ವಿದೇಶಿ ಉದ್ಯಮಗಳಿಗೆ ಭಾರತೀಯ ಚಲನಚಿತ್ರ ಮಾರುಕಟ್ಟೆಯು ಆಕರ್ಷಕ ತಾಣವಾಗಿ ಕಂಡಿದೆ. ಭಾರತದ ಪ್ರಸಿದ್ಧ ಉದ್ಯಮಗಳು ಕೂಡಾ ಚಲನಚಿತ್ರಗಳ ನಿರ್ಮಾಣ ಹಾಗೂ ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವು. ಮಲ್ಟಿಪ್ಲೆಕ್ಸ್ಗಳಿಗೆ ನೀಡಲಾದ ತೆರಿಗೆಯ ಉತ್ತೇಜಕ ಸವಲತ್ತುಗಳು ಭಾರತದಲ್ಲಿನ ಮಲ್ಟಿಪ್ಲೆಕ್ಸ್ಗಳ ಭರಾಟೆಗೆ ಕಾರಣವಾದವು. ೨೦೦೩ರ ವೇಳೆಗೆ ಏನಿಲ್ಲವೆಂದರೂ ೩೦ ಚಲನಚಿತ್ರ ತಯಾರಿಕಾ ಕಂಪನಿಗಳು ಭಾರತದ ರಾಷ್ಟ್ರೀಯ ಸ್ಟಾಕ್ ವಿನಿಮಯ ಕೇಂದ್ರದಲ್ಲಿ ಪಟ್ಟೀಕರಣಕ್ಕೊಳಗಾಗುವ ಮೂಲಕ, ಸದರಿ ಮಾಧ್ಯಮವು ಅನುಭವಕ್ಕೆ ತಂದುಕೊಂಡಿರುವ ವ್ಯಾಪಾರೀ ಅಸ್ತಿತ್ವವನ್ನು ಎಲ್ಲರ ಮನಗಾಣಿಸಿದವು. ಚದುರಿಹೋದ ಭಾರತೀಯ ಜನರಗುಂಪು ಸಾಗರೋತ್ತರ ದೇಶಗಳಲ್ಲಿರುವ ಲಕ್ಷಗಟ್ಟಲೆ ಭಾರತೀಯರನ್ನು ಒಳಗೊಂಡಿದ್ದು, ಅವರಿಗಾಗಿ ಆಗಿಆಗಳಂಥ ಮಾಧ್ಯಮಗಳ ಮೂಲಕ ಹಾಗೂ ಅವರು ವಾಸವಾಗಿರುವ ದೇಶಗಳಲ್ಲಿ ವಾಣಿಜ್ಯ ಸ್ವರೂಪದಲ್ಲಿ ಕಾರ್ಯಸಾಧ್ಯವಾಗುವ ಕಡೆಯಲ್ಲೆಲ್ಲಾ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಚಲನಚಿತ್ರಗಳು ಅವರಿಗೂ ಲಭ್ಯವಾಗುವಂಥ ಅವಕಾಶ ಕಲ್ಪಿಸಲಾಗಿದೆ. ಮುಖ್ಯವಾಹಿನಿ ಚಲನಚಿತ್ರವೊಂದರಿಂದ ಸಂಗ್ರಹವಾದ ಆದಾಯದ ಪೈಕಿ ಸುಮಾರು ೧೨%ನಷ್ಟು ಪಾಲನ್ನು ಹೊಂದಿರುವ ಈ ಗಳಿಕೆಗಳು, ಭಾರತೀಯ ಚಿತ್ರರಂಗದ ಒಟ್ಟಾರೆ ಆದಾಯಕ್ಕೆ ಗಣನೀಯವಾದ ಕೊಡುಗೆಯನ್ನು ಕೊಟ್ಟಿವೆ. ೨೦೦೦ನೇ ಇಸವಿಯಲ್ಲಿ ಈ ಗಳಿಕೆಯು ೧.೩ ಶತಕೋಟಿ US ಡಾಲರುಗಳಷ್ಟಿದ್ದುದು ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತದೆ. ದೇಶದಲ್ಲಿನ ಚಲನಚಿತ್ರ ತಯಾರಿಕೆಗಾಗಿರುವ ಸೌಲಭ್ಯಗಳಲ್ಲಿ ತೆಲುಗು ಚಲನಚಿತ್ರೋದ್ಯಮದ ನೆಲೆಯಾಗಿರುವ ಹೈದರಾಬಾದ್ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯು ಸೇರಿಕೊಂಡಿದ್ದು, ಗಿನ್ನೆಸ್ ವಿಶ್ವ ದಾಖಲೆಗಳಿಂದ ಪ್ರಮಾಣೀಕರಿಸಲ್ಪಟ್ಟಂತೆ ಇದು ವಿಶ್ವದಲ್ಲಿನ ಅತ್ಯಂತ ದೊಡ್ಡ ಚಲನಚಿತ್ರ ಸ್ಟುಡಿಯೋ ಸಂಕೀರ್ಣವಾಗಿದೆ. ಸಂಗೀತವು ಭಾರತೀಯ ಚಿತ್ರರಂಗಕ್ಕೆ ಗಣನೀಯ ಪ್ರಮಾಣದಲ್ಲಿ ಆದಾಯವನ್ನು ತರುತ್ತಿರುವ ಮತ್ತೊಂದು ಅಂಗವಾಗಿದೆ. ಭಾರತರದಲ್ಲಿ ಚಲನಚಿತ್ರವೊಂದರಿಂದ ಸಂಗ್ರಹಿಸಲ್ಪಡುವ ನಿವ್ವಳ ಆದಾಯಗಳ ಪೈಕಿ ಕೇವಲ ಸಂಗೀತದ ಹಕ್ಕುಗಳಿಂದಲೇ ಬರುವ ಆದಾಯವು ೪೫%ನಷ್ಟಿರುತ್ತದೆ.೧೯೧೩ರಲ್ಲಿ ಭಾರತವು ತನ್ನ ಮೊದಲ ಚಲನಚಿತ್ರವನ್ನು ತಯಾರಿಸಿತು.ಇಂದು ಬಾಲಿವುಡ್ ವಿಶ್ವದಲ್ಲೇ ಅತ್ಯಂತ ಹೆಚ್ಚು ಚಲನಚಿತ್ರವನ್ನು ನಿರ್ಮಿಸುವ ಉದ್ಯಮವಾಗಿದೆ. ಇತಿಹಾಸ ಲಂಡನ್ನಲ್ಲಿ ಲೂಮಿಯೇರ್ ಚಲನಚಿತ್ರಗಳ ಪ್ರದರ್ಶನವಾದ (೧೮೯೫) ನಂತರ ಚಲನಚಿತ್ರ ಎಂಬುದು ಯುರೋಪ್ನಾದ್ಯಂತ ಒಂದು ಸಂಚಲನೆಯನ್ನೇ ಸೃಷ್ಟಿಸಿತು ಮತ್ತು ೧೮೯೬ರ ಜುಲೈ ವೇಳೆಗೆ ಲೂಮಿಯೇರ್ ಚಲನಚಿತ್ರಗಳು ಬಾಂಬೆಯಲ್ಲಿ (ಈಗ ಮುಂಬಯಿ) ಪ್ರದರ್ಶನ ಭಾಗ್ಯವನ್ನು ಕಂಡಿದ್ದವು. ಮೊದಲ ಕಿರುಚಿತ್ರಗಳು ಭಾರತದಲ್ಲಿ ಹೀರಾಲಾಲ್ ಸೇನ್ನಿಂದ ನಿರ್ದೇಶಿಸಲ್ಪಟ್ಟವು. ದಿ ಫ್ಲವರ್ ಆಫ್ ಪರ್ಷಿಯಾ (೧೮೯೮) ಎಂಬ ಕಿರುಚಿತ್ರವು ಅದರಲ್ಲಿ ಮೊದಲನೆಯದಾಗಿತ್ತು. ಭಾರತದಲ್ಲಿ ಪೂರ್ಣ-ಪ್ರಮಾಣದ ಮೊದಲ ಚಲನಚಿತ್ರವು ದಾದಾಸಾಹೇಬ್ ಫಾಲ್ಕೆಯಿಂದ ನಿರ್ಮಿಸಲ್ಪಟ್ಟವು. ಭಾರತದ ಭಾಷೆಗಳು ಹಾಗೂ ಸಂಸ್ಕೃತಿಯ ಕುರಿತಾಗಿ ಪಾಂಡಿತ್ಯವನ್ನು ಸಂಪಾದಿಸಿಕೊಂಡಿದ್ದ ಈತ ರಾಜಾ ಹರಿಶ್ಚಂದ್ರ (೧೯೧೩) ಎಂಬ ಒಂದು ಮರಾಠಿ ಮೂಕಿ ಚಲನಚಿತ್ರವನ್ನು ನಿರ್ಮಿಸಲು ಸಂಸ್ಕೃತ ಮಹಾಕಾವ್ಯಗಳಲ್ಲಿ ಹೇರಳವಾಗಿದ್ದ ಮೂಲಾಂಶಗಳನ್ನು ಒಟ್ಟುಗೂಡಿಸಿದ. (ಕುತೂಹಲಕರ ವಿಷಯವೆಂದರೆ, ಈ ಚಲನಚಿತ್ರದಲ್ಲಿನ ಸ್ತ್ರೀ ಪಾತ್ರಗಳನ್ನು ಪುರುಷ ಕಲಾವಿದರು ನಿರ್ವಹಿಸಿದ್ದರು.) ಭಾರತದ ಚಲನಚಿತ್ರಮಂದಿರಗಳ ಮೊದಲ ಸರಣಿಯು ಕಲ್ಕತ್ತಾದ ಜಮ್ಷೆಡ್ಜಿ ಫ್ರೇಮ್ಜಿ ಮದನ್ ಎಂಬ ವಾಣಿಜ್ಯೋದ್ಯಮಿಯ ಸ್ವಾಮ್ಯದಲ್ಲಿತ್ತು. ಈತ ವಾರ್ಷಿಕವಾಗಿ ೧೦ ಚಲನಚಿತ್ರಗಳ ತಯಾರಿಕೆಯ ಮೇಲ್ವಿಚಾರಣೆಯನ್ನು ಮಾಡಿದ್ದ ಹಾಗೂ ಭಾರತೀಯ ಉಪಖಂಡದಾದ್ಯಂತ ಅವುಗಳನ್ನು ವಿತರಿಸಿದ್ದ. ಇಪ್ಪತ್ತನೇ ಶತಮಾನದ ಆರಂಭದ ಅವಧಿಯಲ್ಲಿ ಚಲನಚಿತ್ರವು ಒಂದು ಮಾಧ್ಯಮವಾಗಿ ಭಾರತದ ಜನಸಮೂಹದಾದ್ಯಂತ ಹಾಗೂ ಅದರ ಅನೇಕ ಆರ್ಥಿಕ ವರ್ಗಗಳಾದ್ಯಂತ ಜನಪ್ರಿಯತೆಯನ್ನು ಗಳಿಸಿತು. ಶ್ರೀಸಾಮಾನ್ಯನ ಕೈಗೂ ಎಟುಕುವಂತಿರಲು ಟಿಕೆಟ್ಟುಗಳಿಗೆ ಕಡಿಮೆ ಬೆಲೆಯನ್ನು ನಿಗದಿಪಡಿಸಲಾಗಿತ್ತು ಹಾಗೂ ಸಾಕಷ್ಟು ಸ್ಥಿತಿವಂತರಾದವರಿಗೆ ಹೆಚ್ಚುವರಿ ಬೆಲೆಯ ಪ್ರವೇಶದ ಟಿಕೆಟ್ನ್ನು ನಿಗದಿಪಡಿಸಿದ್ದೇ ಹೆಚ್ಚುವರಿ ಸೌಕರ್ಯಗಳ ಸೂಚಕವಾಗಿತ್ತು. ಕೇವಲ ಒಂದು ಆಣೆ ಯಷ್ಟು (ಬಾಂಬೆಯಲ್ಲಿ ೪ ಪೈಸಾ ) ಕಡಿಮೆಯಿದ್ದ ಪ್ರವೇಶಶುಲ್ಕದಲ್ಲಿ ಈ ಮನರಂಜನಾ ಮಾಧ್ಯಮವು ಲಭ್ಯವಾಗಿದ್ದರಿಂದ ಪ್ರೇಕ್ಷಕ ವೃಂದವು ಚಲನಚಿತ್ರ ಮಂದಿರಗಳಿಗೆ ಗುಂಪಾಗಿ ನುಗ್ಗಿತು. ಈ ಸಾಮಾನ್ಯ ವರ್ಗದ ಜನರ ಮನವನ್ನು ತಟ್ಟುವ ರೀತಿಯಲ್ಲಿ ಭಾರತೀಯ ವ್ಯಾಪಾರಿ ಚಲನಚಿತ್ರಗಳ ವಿಷಯವು ಗಣನೀಯ ಪ್ರಮಾಣದಲ್ಲಿ ರೂಪುಗೊಂಡಿತು. ಭಾರತದ ಸಾಮಾಜಿಕ ಜೀವನ ಹಾಗೂ ಸಂಸ್ಕೃತಿಯ ಮೂಲಾಂಶಗಳನ್ನು ಚಲನಚಿತ್ರದೊಳಗೆ ಅಳವಡಿಸಲು ಯುವ ಭಾರತೀಯ ನಿರ್ಮಾಪಕರು ಶುರುಮಾಡಿದರು. ಇತರರು ತಮ್ಮೊಂದಿಗೆ ವಿಶ್ವಾದ್ಯಂತದ ಪರಿಕಲ್ಪನೆಗಳನ್ನು ಹೊತ್ತುತಂದರು.ಇದು ಭಾರತದ ಚಲನಚಿತ್ರೋದ್ಯಮದ ಕುರಿತು ಜಾಗತಿಕ ಪ್ರೇಕ್ಷಕರು ಹಾಗೂ ಮಾರುಕಟ್ಟೆಗಳು ಅರಿವು ಮೂಡಿಸಿಕೊಂಡ ಕಾಲವೂ ಆಗಿತ್ತು. ಮಾತುಗಳನ್ನು ಅಳವಡಿಸಲಾಗಿದ್ದ ಮೊಟ್ಟಮೊದಲ ಭಾರತೀಯ ಚಲನಚಿತ್ರವಾದ ಅಲಂ ಆರಾ ವನ್ನು ೧೯೩೧ರ ಮಾರ್ಚ್ ೧೪ರಂದು ಆರ್ದೇಶಿರ್ ಇರಾನಿ ಬಿಡುಗಡೆ ಮಾಡಿದ. ಭಾರತದಲ್ಲಿನ 'ವಾಕ್ಚಿತ್ರಗಳ' ಪ್ರಾರಂಭವನ್ನು ಅನುಸರಿಸಿ ಕೆಲವೊಂದು ಚಲನಚಿತ್ರ ತಾರೆಯರ ಅಗತ್ಯ ಹೆಚ್ಚಿನ ರೀತಿಯಲ್ಲಿ ಕಂಡುಬಂತು ಹಾಗೂ ನಟನೆಯ ಮೂಲಕ ಆರಾಮದಾಯಕವಾದ ಆದಾಯಗಳನ್ನು ಅವರು ಗಳಿಸಿದರು.ಧ್ವನಿ ತಂತ್ರಜ್ಞಾನವು ಪ್ರಗತಿಯನ್ನು ಕಂಡಂತೆ ೧೯೩೦ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಂಗೀತದ ಏಳಿಗೆಯು ಕಂಡುಬಂದಿತು. ಇಂದ್ರಸಭಾ ಮತ್ತು ದೇವಿ ದೇವಯಾನಿ ಯಂಥ ಸಂಗೀತಮಯ ಚಿತ್ರಗಳು ಭಾರತದ ಚಲನಚಿತ್ರಗಳಲ್ಲಿ ಹಾಡು-ಮತ್ತು-ನೃತ್ಯವು ಶುರುವಾಗುವುದಕ್ಕೆ ಅಂಕಿತ ಹಾಕಿದವು. ೧೯೩೫ರ ಹೊತ್ತಿಗೆ ಚಲನಚಿತ್ರ ತಯಾರಿಕೆಯು ಒಂದು ನೆಲೆಗೊಳಿಸಲ್ಪಟ್ಟ ಕುಶಲಕಲೆಯಾಗಿ ಮಾರ್ಪಟ್ಟ ಕಾರಣದಿಂದ, ಚೆನ್ನೈ, ಕೋಲ್ಕತಾ, ಹಾಗೂ ಮುಂಬಯಿಯಂಥ ಪ್ರಮುಖ ನಗರಗಳಾದ್ಯಂತ ಸ್ಟುಡಿಯೋಗಳು ತಲೆಯೆತ್ತಿದವು. ರಾಷ್ಟ್ರವ್ಯಾಪಿಯಾಗಿ ಪ್ರೇಕ್ಷಕರನ್ನು ಮೋಹಪರವಶಗೊಳಿಸುವಲ್ಲಿ ಸಮರ್ಥವಾದ ದೇವದಾಸ್ ಚಿತ್ರದ ಯಶಸ್ಸು ಇದಕ್ಕೆ ನಿದರ್ಶನವಾಗಿ ಹೊರಹೊಮ್ಮಿತು. ೧೯೩೪ರಲ್ಲಿ ಬಾಂಬೆ ಟಾಕೀಸ್ ಹುಟ್ಟಿಕೊಂಡಿತು ಮತ್ತು ಪುಣೆಯಲ್ಲಿನ ಪ್ರಭಾತ್ ಸ್ಟುಡಿಯೋಸ್, ಮರಾಠಿ ಭಾಷೆಯ ಪ್ರೇಕ್ಷಕರನ್ನು ಉದ್ದೇಶಿಸಿದ ಚಲನಚಿತ್ರಗಳನ್ನು ತಯಾರಿಸಲು ಶುರುಮಾಡಿತ್ತು. ಚಲನಚಿತ್ರ ತಯಾರಕ ಖ. S. ಆ. ಚೌಧುರಿಯು ರಾತ್ (೧೯೩೦) ಎಂಬ ಚಿತ್ರವನ್ನು ನಿರ್ಮಿಸಿದ. ಈ ಚಿತ್ರದಲ್ಲಿ ನಟರನ್ನು ಭಾರತದ ನಾಯಕರುಗಳೆಂಬಂತೆ ಚಿತ್ರಿಸಲಾಗಿದ್ದರಿಂದ, ಭಾರತೀಯ ಸ್ವಾತಂತ್ರ್ಯ ಚಳವಳಿಯ ದಿನಗಳ ಅವಧಿಯಲ್ಲಿನ ನಿಷೇಧಕ್ಕೊಳಗಾಗಿದ್ದ ಒಂದು ಅಭಿವ್ಯಕ್ತಿಯಾಗಿ ಇದನ್ನು ಪರಿಗಣಿಸಿ, ಅಂದು ಭಾರತದಲ್ಲಿದ್ದ ಬ್ರಿಟಿಷ್ ಆಳ್ವಿಕೆಯು ಈ ಚಿತ್ರವನ್ನು ನಿಷೇಧಿಸಿತು. ಹಾಡು, ನೃತ್ಯ, ಪ್ರಣಯ ಇತ್ಯಾದಿಗಳೊಂದಿಗಿನ ವ್ಯಾಪಾರೀ ಚಲನಚಿತ್ರಗಳಿಗಾಗಿ ಬಳಸಲಾಗುತ್ತಿದ್ದ ಒಂದು ಪರಿಭಾಷೆಯಾದ ಭಾರತೀಯ ಮಸಾಲಾ ಚಲನಚಿತ್ರ ವು ಎರಡನೇ ಜಾಗತಿಕ ಸಮರದ ನಂತರ ಹುಟ್ಟಿಕೊಂಡಿತು. S.S. ವಾಸನ್ರ ಚಂದ್ರಲೇಖಾ ಚಲನಚಿತ್ರವು ಬಿಡುಗಡೆಯಾಗುವುದರೊಂದಿಗೆ ದಕ್ಷಿಣ ಭಾರತೀಯ ಚಿತ್ರರಂಗವು ಭಾರತದಾದ್ಯಂತ ಪ್ರಸಿದ್ಧಿಯನ್ನು ಗಳಿಸಿತು. ೧೯೪೦ರ ದಶಕದ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿನ ಚಲನಚಿತ್ರವು ಭಾರತದ ಹೆಚ್ಚೂಕಮ್ಮಿ ಅರ್ಧದಷ್ಟು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿತು ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಒಂದು ಸಾಧನವಾಗಿ ಚಲನಚಿತ್ರವನ್ನು ನೋಡುವ ಪರಿಪಾಠವು ಸೃಷ್ಟಿಯಾಯಿತು. ಭಾರತದ ಸ್ವಾತಂತ್ರ್ಯದ ನಂತರ ಕಂಡುಬಂದ ಭಾರತದ ವಿಭಜನೆಯು ರಾಷ್ಟ್ರದ ಸ್ವತ್ತುಗಳನ್ನೂ ಸಹ ವಿಭಜಿಸಿತು. ಇದರ ಪರಿಣಾಮವಾಗಿ ಹಲವಾರು ಸ್ಟುಡಿಯೋಗಳು ಹೊಸದಾಗಿ ರೂಪುಗೊಂಡ ಪಾಕಿಸ್ತಾನಕ್ಕೆ ಸೇರ್ಪಡೆಯಾದವು. ಈ ವಿದ್ಯಮಾನವು ನಡೆದ ನಂತರದ ದಶಕಗಳಲ್ಲಿ, ವಿಭಜನೆಯ ಘರ್ಷಣೆಯು ಚಲನಚಿತ್ರ ತಯಾರಿಕೆಗೆ ಸಂಬಂಧಿಸಿದಂತೆ ಒಂದು ಸಹಿಸಿಕೊಂಡಿರಲೇ ಬೇಕಾದ ವಿಷಯವಾಗಿ ಪರಿಣಮಿಸಿತ್ತು. ಸ್ವಾತಂತ್ರ್ಯಾನಂತರದಲ್ಲಿ ಭಾರತದ ಚಲನಚಿತ್ರೋದ್ಯಮವು ಕೆ.ಎ. ಪಾಟೀಲ್ ಆಯೋಗದಿಂದ ವಿಚಾರಿಸಿಕೊಳ್ಳಲ್ಪಟ್ಟಿತು. ಆಯೋಗದ ಮುಖ್ಯಸ್ಥನಾದ ಕೆ.ಎ. ಪಾಟೀಲ್, ಭಾರತದಲ್ಲಿನ ಚಲನಚಿತ್ರರಂಗದ ವ್ಯಾಪಾರೀ ಮೌಲ್ಯವನ್ನು ಗುರುತುಹಾಕಿಕೊಳ್ಳುವುದರ ಜೊತೆಗೇ, ಚಲನಚಿತ್ರವನ್ನು 'ಕಲೆ, ಉದ್ಯಮ, ಹಾಗೂ ಪ್ರದರ್ಶಕ ಕಲೆಯ ಒಂದು ಸಂಯೋಜಿತ ಸ್ಥಿತಿಯಾಗಿ' ನೋಡಿದ.ಪಾಟೀಲ್ ಮತ್ತಷ್ಟು ಮುಂದುವರಿದು, ಹಣಕಾಸು ಖಾತೆಯ ಅಡಿಯಲ್ಲಿ ಚಲನಚಿತ್ರ ಹಣಕಾಸು ನಿಗಮವೊಂದನ್ನು ಸ್ಥಾಪಿಸುವುದರ ಕಡೆಗೆ ಶಿಫಾರಸು ಮಾಡಿದ. ಈ ಸಲಹೆಯನ್ನು ನಂತರ ೧೯೬೦ರಲ್ಲಿ ಕೈಗೆತ್ತಿಕೊಳ್ಳಲಾಯಿತು ಹಾಗೂ ಭಾರತದಾದ್ಯಂತವಿರುವ ಪ್ರತಿಭಾನ್ವಿತ ಚಲನಚಿತ್ರ ತಯಾರಕರಿಗೆ ಹಣಕಾಸಿನ ಬೆಂಬಲವನ್ನು ಒದಗಿಸುವ ದೃಷ್ಟಿಯಿಂದ ಈ ಸಂಸ್ಥೆಯು ಅಸ್ತಿತ್ವಕ್ಕೆ ಬಂತು. ೧೯೪೯ರ ವೇಳೆಗೆ ಚಲನಚಿತ್ರಗಳ ವಿಭಾಗವೊಂದನ್ನು ಭಾರತದ ಸರ್ಕಾರವು ಸ್ಥಾಪಿಸಿತ್ತು. ಅಂತಿಮವಾಗಿ ಇದು ವಿಶ್ವದಲ್ಲಿನ ಅತಿದೊಡ್ಡ ಸಾಕ್ಷ್ಯಚಿತ್ರ ನಿರ್ಮಾಪಕರಲ್ಲಿ ಒಂದೆನಿಸಿಕೊಂಡಿದ್ದೇ ಅಲ್ಲದೇ, ಪ್ರತಿವರ್ಷವೂ ೨೦೦ಕ್ಕೂ ಹೆಚ್ಚಿನ ಕಿರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಾ ಬಂದಿತು. ಇವುಗಳ ಪೈಕಿ ಪ್ರತಿಯೊಂದು ಕಿರು ಸಾಕ್ಷ್ಯಚಿತ್ರವೂ ೧೮ ಭಾಷೆಗಳಲ್ಲಿ ೯೦೦೦ ಪ್ರತಿಗಳೊಂದಿಗೆ ಬಿಡುಗಡೆಯಾಗಿ ದೇಶಾದ್ಯಂತವಿರುವ ಕಾಯಂ ಚಿತ್ರಮಂದಿರಗಳಿಗೆ ವಿತರಿಸಲ್ಪಟ್ಟವು. ಒಂದು ಕಮ್ಯುನಿಸ್ಟ್ ಪ್ರವೃತ್ತಿಯೊಂದಿಗಿನ ಒಂದು ಕಲಾ ಚಟುವಟಿಕೆಯಾದ ಇಂಡಿಯನ್ ಪೀಪಲ್'ಸ್ ಥಿಯೇಟರ್ ಅಸೋಸಿಯೇಷನ್ , ೧೯೪೦ರ ದಶಕ ಮತ್ತು ೧೯೫೦ರ ದಶಕದಾದ್ಯಂತ ಆಕಾರವನ್ನು ಪಡೆಯುಲು ಶುರುವಿಟ್ಟುಕೊಂಡಿತು.೧೯೪೪ರಲ್ಲಿ ಬಂದ ಬಿಜೋನ್ ಭಟ್ಟಾಚಾರ್ಯರ ನಬನ್ನಾ ದಂಥ (೧೯೪೩ರ ಬಂಗಾಳದ ಬರಗಾಲದ ದುರಂತವನ್ನು ಆಧರಿಸಿದ್ದು), IPಖಿಂಯ ವಾಸ್ತವಿಕ ದೃಷ್ಟಿಕೋನದ ಅನೇಕ ನಾಟಕಗಳು ಭಾರತೀಯ ಚಿತ್ರರಂಗದಲ್ಲಿ ಯಥಾರ್ಥತೆಯ ಘನೀಕರಣಕ್ಕೆ ಸಂಬಂಧಿಸಿದ ತಳಹದಿಯನ್ನು ಸಿದ್ಧಗೊಳಿಸಿದವು. ೧೯೪೬ರಲ್ಲಿ ಬಂದ ಖ್ವಾಜಾ ಅಹ್ಮದ್ ಅಬ್ಬಾಸ್ರ ಧರ್ತಿ ಕೆ ಲಾಲ್ (ಭೂಮಿಯ ಮಕ್ಕಳು) ಚಿತ್ರವು ಇದನ್ನು ನಿದರ್ಶನದ ಮೂಲಕ ನಿರೂಪಿಸಿತು. ಯಥಾರ್ಥತೆಯ ಮೇಲೆ ಒತ್ತು ನೀಡುವುದನ್ನು ಆಂದೋಲನ ಅಥವಾ ಚಟುವಟಿಕೆಯು ಮುಂದುವರಿಸಿತು ಹಾಗೂ ಭಾರತದ ಅತ್ಯಂತ ಅಭಿಜ್ಞೇಯ ಸಿನಿಮೀಯ ತಯಾರಿಕೆಗಳಲ್ಲಿ ಸೇರಿದ ಮದರ್ ಇಂಡಿಯಾ ಹಾಗೂ ಪ್ಯಾಸಾ ಎಂಬ ಚಲನಚಿತ್ರಗಳನ್ನು ನಿರ್ಮಿಸಿತು. ಭಾರತೀಯ ಚಿತ್ರರಂಗದ ಸುವರ್ಣ ಯುಗ ಭಾರತದ ಸ್ವಾತಂತ್ರ್ಯದ ನಂತರದ, ೧೯೪೦ರ ದಶಕದ ಅಂತ್ಯದಿಂದ ೧೯೬೦ರ ದಶಕದವರೆಗಿನ ಅವಧಿಯನ್ನು ಚಲನಚಿತ್ರದ ಇತಿಹಾಸಕಾರರು ಭಾರತೀಯ ಚಿತ್ರರಂಗದ 'ಸುವರ್ಣ ಯುಗ' ಎಂದು ಪರಿಗಣಿಸಿದ್ದಾರೆ. ವಿಮರ್ಶಾತ್ಮಕವಾಗಿ ಅತ್ಯಂತ ಮೆಚ್ಚುಗೆಯನ್ನು ಪಡೆದ ಭಾರತದ ಕೆಲವೊಂದು ಸಾರ್ವಕಾಲಿಕ ಚಲನಚಿತ್ರಗಳು ಈ ಅವಧಿಯಲ್ಲಿಯೇ ನಿರ್ಮಿಸಲ್ಪಟ್ಟವು. ವ್ಯಾಪಾರೀ ಹಿಂದಿ ಚಿತ್ರರಂಗದಲ್ಲಿ ಈ ಸಮಯದಲ್ಲಿ ಬಂದ ಪ್ರಸಿದ್ಧ ಚಲನಚಿತ್ರಗಳ ಉದಾಹರಣೆಗಳಲ್ಲಿ ಗುರುದತ್ ಚಲನಚಿತ್ರಗಳಾದ ಪ್ಯಾಸಾ (೧೯೫೭) ಹಾಗೂ ಕಾಗಜ್ ಕೆ ಫೂಲ್ (೧೯೫೯) ಮತ್ತು ರಾಜ್ ಕಪೂರ್ಚಲನಚಿತ್ರಗಳಾದ ಆವಾರಾ (೧೯೫೧) ಹಾಗೂ ಶ್ರೀ ೪೨೦ (೧೯೫೫) ಸೇರಿವೆ. ಮುಖ್ಯವಾಗಿ ಭಾರತದಲ್ಲಿನ ಕಾರ್ಮಿಕ-ವರ್ಗದ ನಗರ ಜೀವನದೊಂದಿಗೆ ಸಂಬಂಧಿಸಿದ ಸಾಮಾಜಿಕ ವಿಷಯಗಳನ್ನು ಈ ಚಲನಚಿತ್ರಗಳು ಅಭಿವ್ಯಕ್ತಿಸಿದವು; ಆವಾರಾ ಚಲನಚಿತ್ರವು ನಗರವನ್ನು ಒಂದು ಘೋರಸ್ವಪ್ನದ ಹಾಗೂ ಒಂದು ಕನಸಿನ ರೂಪಗಳೆರಡರಲ್ಲೂ ಸಾದರಪಡಿಸಿದರೆ, ಪ್ಯಾಸಾ ಚಲನಚಿತ್ರವು ನಗರ ಜೀವನದ ಅವಾಸ್ತವಿಕತೆ ಅಥವಾ ಮಿಥ್ಯೆಯನ್ನು ವಿಮರ್ಶಾತ್ಮಕವಾಗಿ ಚರ್ಚಿಸಿತು. ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿರುವ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಮೆಹಬೂಬ್ ಖಾನ್ರ ಮದರ್ ಇಂಡಿಯಾ(೧೯೫೭) ಮತ್ತು ಏ. ಆಸಿಫ್ರ ಮುಘಲ್-ಎ-ಅಜಮ್ (೧೯೬೦) ಚಿತ್ರಗಳೂ ಸೇರಿದಂತೆ, ಹಿಂದಿ ಚಿತ್ರರಂಗದ ಕೆಲವೊಂದು ಅತ್ಯಂತ ಪ್ರಸಿದ್ಧವಾದ ಮಹಾಕಾವ್ಯದಂಥ ಚಲನಚಿತ್ರಗಳು ಈ ಅವಧಿಯಲ್ಲೇ ತಯಾರಿಸಲ್ಪಟ್ಟವು. ಗಿ. ಶಾಂತಾರಾಂರವರ ದೋ ಆಂಖೇ ಬಾರಾ ಹಾತ್ (೧೯೫೭) ಚಿತ್ರವು ದಿ ಡರ್ಟಿ ಡಜನ್ (೧೯೬೭) ಎಂಬ ಹಾಲಿವುಡ್ ಚಲನಚಿತ್ರಕ್ಕೆ ಪ್ರೇರಣೆಯನ್ನು ನೀಡಿತು ಎಂದು ನಂಬಲಾಗಿದೆ. ಋತ್ವಿಕ್ ಘಾಟಕ್ರವರ ಕಥೆಯನ್ನು ಹೊಂದಿದ್ದು ಬಿಮಲ್ ರಾಯ್ರಿಂದ ನಿರ್ದೇಶಿಸಲ್ಪಟ್ಟ ಮಧುಮತಿ (೧೯೫೮) ಚಿತ್ರವು ಪಾಶ್ಚಿಮಾತ್ಯ ಜನಪ್ರಿಯ ಸಂಸ್ಕೃತಿಯಲ್ಲಿ ಪುನರ್ಜನ್ಮದ ವಿಷಯವನ್ನು ಜನಪ್ರಿಯಗೊಳಿಸಿತು.ಕಮಲ್ ಅಮ್ರೋಹಿ ಮತ್ತು ವಿಜಯ್ ಭಟ್ ಮೊದಲಾದವರು ಆ ಸಮಯದಲ್ಲಿದ್ದ ಇತರ ಮುಖ್ಯವಾಹಿನಿಯ ಹಿಂದಿ ಚಲನಚಿತ್ರ ತಯಾರಕರಲ್ಲಿ ಸೇರಿದ್ದರು. ಭಾರತದ ವ್ಯಾಪಾರೀ ಚಲನಚಿತ್ರಗಳು ಅಭಿವೃದ್ಧಿ ಹೊಂದುತ್ತಿರುವಾಗಲೇ, ಮುಖ್ಯವಾಗಿ ಬಂಗಾಳಿ ಚಿತ್ರರಂಗದ ನೇತೃತ್ವವನ್ನು ಹೊಂದಿದ್ದ ಸಮಾನಾಂತರ ಚಲನಚಿತ್ರದ ಒಂದು ಹೊಸ ಆಂದೋಲನದ ಉದಯವನ್ನೂ ಈ ಅವಧಿಯು ಕಂಡಿತು. ಈ ಆಂದೋಲನದಲ್ಲಿನ ಚಲನಚಿತ್ರಗಳ ಆರಂಭಿಕ ಉದಾಹರಣೆಗಳಲ್ಲಿ, ಚೇತನ್ ಆನಂದ್ರ ನೀಚಾ ನಗರ್ (೧೯೪೬),ಋತ್ವಿಕ್ ಘಾಟಕ್ರನಾಗರಿಕ್ (೧೯೫೨), ಮತ್ತು ಬಿಮಲ್ ರಾಯ್ರವರ ಟೂ ಏಕರ್ಸ್ ಆಫ್ ಲ್ಯಾಂಡ್ (೧೯೫೩) ಚಿತ್ರಗಳು ಸೇರಿದ್ದು, ಇವು ಭಾರತೀಯ ನವಯಥಾರ್ಥತೆ ಮತ್ತು "ಭಾರತೀಯ ಹೊಸ ಅಲೆ"ಗಳಿಗೆ ಬುನಾದಿಗಳನ್ನು ಹಾಕಿದವು. ಸತ್ಯಜಿತ್ ರೇಯಿಂದ ಚಿತ್ರಿಸಲ್ಪಟ್ಟ ದಿ ಅಪು ಟ್ರೈಲಜಿ ಯ (೧೯೫೫-೧೯೫೯) ಮೊದಲ ಭಾಗವಾದ ಪಥೇರ್ ಪಾಂಚಾಲಿ (೧೯೫೫) ಚಿತ್ರವು ಭಾರತೀಯ ಚಿತ್ರರಂಗದಲ್ಲಿನ ಅವರ ಪ್ರವೇಶವನ್ನು ಗುರುತುಮಾಡಿದವು. ದಿ ಅಪು ಟ್ರೈಲಜಿ ಚಿತ್ರವು ಎಲ್ಲಾ ಪ್ರಮುಖ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಮುಖ ಬಹುಮಾನಗಳನ್ನು ಗೆದ್ದಿತು ಹಾಗೂ ಭಾರತೀಯ ಚಿತ್ರರಂಗದಲ್ಲಿ 'ಸಮಾನಾಂತರ ಚಲನಚಿತ್ರ'ದ ಆಂದೋಲನವು ಭದ್ರವಾಗಿ ನೆಲೆಯೂರುವುದಕ್ಕೆ ಕಾರಣವಾಯಿತು. "ದಿ ಅಪು ಟ್ರೈಲಜಿ" ಚಿತ್ರದ ಒಂದು ಅತ್ಯಮೋಘ ಪ್ರಥಮ ಪರಿಚಯಕ್ಕೆ ಕಾರಣವಾದ" "ಐವತ್ತರ ದಶಕದ ಮಧ್ಯಭಾಗದಿಂದ ಕಲಾತ್ಮಕ ಚಿತ್ರಗಳ ನಿರ್ಮಾಣ ನೆಲೆಗಳಿಗೆ ಭರಪೂರವಾಗಿ ಬಂದ ಪ್ರಾಪ್ತ-ವಯಸ್ಸಿಗೆ-ಬರುತ್ತಿರುವ ಹೊಸತನದ ನಾಟಕೀಯ ಚಿತ್ರಗಳಲ್ಲಿಯೂ"ಜಾಗತಿಕ ಚಿತ್ರರಂಗದ ಮೇಲಿನ ಇದರ ಪ್ರಭಾವವನ್ನು ಕಂಡುಕೊಳ್ಳಬಹುದು. ವಿಮರ್ಶಾತ್ಮಕವಾಗಿ-ಮೆಚ್ಚುಗೆ ಪಡೆದ ಇನ್ನೂ ಅನೇಕ 'ಕಲಾತ್ಮಕ ಚಲನಚಿತ್ರಗಳನ್ನು' ಸತ್ಯಜಿತ್ ರೇ ಹಾಗೂ ಋತ್ವಿಕ್ ಘಾಟಕ್ ನಿರ್ದೇಶಿಸುತ್ತಾ ಹೋದರು. ಅಷ್ಟೇ ಅಲ್ಲ, ಮೃಣಾಲ್ ಸೇನ್, ಅಡೂರ್ ಗೋಪಾಲಕೃಷ್ಣನ್, ಮಣಿಕೌಲ್ ಮತ್ತು ಬುದ್ಧದೇಬ್ ದಾಸ್ಗುಪ್ತಾರಂಥ ಭಾರತದ ಇತರ, ಮೆಚ್ಚುಗೆ ಪಡೆದ ಸ್ವತಂತ್ರ ಚಲನಚಿತ್ರ ತಯಾರಕರು ಇವರಿಬ್ಬರನ್ನು ಅನುಸರಿಸಿದರು. ೧೯೬೦ರ ದಶಕದ ಅವಧಿಯಲ್ಲಿ, ಇಂದಿರಾ ಗಾಂಧಿಯವರು ಭಾರತದ ಮಾಹಿತಿ ಮತ್ತು ಪ್ರಸಾರಖಾತೆ ಸಚಿವರಾಗಿದ್ದ ಆಡಳಿತಾವಧಿಯಲ್ಲಿ ಕಂಡುಬಂದ ಮಧ್ಯಪ್ರವೇಶವು , ಅಧಿಕೃತವಾದ ಚಲನಚಿತ್ರ ಹಣಕಾಸು ನಿಗಮದಿಂದ ಬೆಂಬಲಿಸಲ್ಪಡುತ್ತಿದ್ದ ವಾಡಿಕೆಯದಲ್ಲದ ಸಿನಿಮೀಯ ಅಭಿವ್ಯಕ್ತಿಯ ತಯಾರಿಕೆಗೆ ಉತ್ತೇಜನ ನೀಡಲು ಕಾರಣವಾಯಿತು. ಸತ್ಯಜಿತ್ ರೇಯವರ ದಿ ಅಪು ಟ್ರೈಲಜಿ ಚಿತ್ರದೊಂದಿಗೆ ತನ್ನ ಪ್ರಥಮ ಪ್ರವೇಶವನ್ನು ಮಾಡಿದ ಸುಬ್ರತಾ ಮಿತ್ರ ಎಂಬ ಚಲನಚಿತ್ರ ಛಾಯಾಗ್ರಾಹಕ ಕೂಡಾ ವಿಶ್ವಾದ್ಯಂತದ ಛಾಯಾಗ್ರಹಣ ಕಲೆಯ ಮೇಲೆ ಒಂದು ಪ್ರಮುಖ ಪ್ರಭಾವವನ್ನು ಬೀರಿದ್ದ. ಚಲನಚಿತ್ರದ ಸಜ್ಜಿಕೆಗಳ (ಸೆಟ್ಟುಗಳ) ಮೇಲೆ ದಿನದ ಬೆಳಕಿನ ಪರಿಣಾಮವನ್ನು ಮರುಸೃಷ್ಟಿಸಲೆಂದು ಬೌನ್ಸ್ ಲೈಟಿಂಗ್ ಎಂಬ ವಿಶಿಷ್ಟ ಶೈಲಿಯನ್ನು ಬಳಸಿದ್ದು ಅವನ ಅತ್ಯಂತ ಪ್ರಮುಖ ಕಾರ್ಯಕೌಶಲಗಳಲ್ಲಿ ಒಂದಾಗಿತ್ತು ದಿ ಅಪು ಟ್ರೈಲಜಿ ಯ ಎರಡನೇ ಭಾಗವಾದ ಅಪರಾಜಿತೋ (೧೯೫೬) ಚಿತ್ರದ ಚಿತ್ರೀಕರಣವನ್ನು ನಡೆಸುವಾಗ ಈ ಕೌಶಲವನ್ನು ಆತ ಮೊದಲು ಶುರುಮಾಡಿದ್ದ. ಸತ್ಯಜಿತ್ ರೇ ಪ್ರವರ್ತಿಸಿದ ಕೆಲವೊಂದು ಪ್ರಯೋಗಾತ್ಮಕ ಕಾರ್ಯಕೌಶಲಗಳಲ್ಲಿ ಫೋಟೋ-ನೆಗಟಿವ್ ಫ್ಲಾಶ್ಬ್ಯಾಕ್ಗಳು ಮತ್ತು ಪ್ರತಿದ್ವಂದಿ (೧೯೭೨) ಚಿತ್ರದ ಚಿತ್ರೀಕರಣದಲ್ಲಿ ಬಳಸಿದ ಘಿ-ರೇ ವಿಷಯಾಂತರಗಳು ಸೇರಿವೆ. ಚಿತ್ರೀಕರಣ ಪ್ರಾರಂಭವಾಗಬೇಕಿದ್ದು ಅಂತಿಮವಾಗಿ ರದ್ದುಮಾಡಲ್ಪಟ್ಟ ದಿ ಏಲಿಯೆನ್ ಎಂಬ ಹೆಸರಿಡಲು ಉದ್ದೇಶಿಸಲಾಗಿದ್ದ ಚಲನಚಿತ್ರವೊಂದಕ್ಕಾಗಿ ೧೯೬೭ರಲ್ಲಿ ರೇ ಸಿದ್ಧಪಡಿಸಿಟ್ಟುಕೊಂಡಿದ್ದ ಚಿತ್ರಕಥೆಯು ಕೂಡಾ ಸ್ಟೀವನ್ ಸ್ಪಿಲ್ಬರ್ಗ್ನ ಚಲನಚಿತ್ರಕ್ಕೆ ಪ್ರೇರಣೆ ನೀಡಿತು ಎಂಬ ನಂಬಿಕೆಯು ವ್ಯಾಪಕವಾಗಿ ಚಾಲ್ತಿಯಲ್ಲಿದೆ (೧೯೮೨).ಋತ್ವಿಕ್ ಘಾಟಕ್ನ ಕೆಲವೊಂದು ಚಲನಚಿತ್ರಗಳು ಕೂಡಾ ನಂತರದಲ್ಲಿ ಬಂದ ಪ್ರಖ್ಯಾತ ಅಂತರರಾಷ್ಟ್ರೀಯ ಚಲನಚಿತ್ರಗಳೊಂದಿಗೆ ಬಲವಾದ ಹೋಲಿಕೆಯನ್ನು ಹೊಂದಿದ್ದವು. ಘಾಟಕ್ನ ಬರಿ ತೆಕೆ ಪಲಿಯೇ (೧೯೫೮) ಚಿತ್ರವು ಫ್ರಾಂಕೋಯಿಸ್ ಟ್ರಫೌಟ್ನ ದಿ ೪೦೦ ಬ್ಲೋಸ್ (೧೯೫೯) ಚಿತ್ರವನ್ನು ಹೋಲುವಂತಿದ್ದರೆ, ಅಜಾಂತ್ರಿಕ್ (೧೯೫೮) ಚಿತ್ರವು ಟ್ಯಾಕ್ಸಿ ಡ್ರೈವರ್ (೧೯೭೬) ಮತ್ತು ಹೆರ್ಬೀ ಚಲನಚಿತ್ರಗಳನ್ನು (೧೯೬೭-೨೦೦೫) ಹೋಲುವ ಮೂಲಾಂಶಗಳನ್ನು ಹೊಂದಿತ್ತು. ಈ ಅವಧಿಯಲ್ಲಿ ಇತರ ಪ್ರಾದೇಶಿಕ ಉದ್ಯಮಗಳೂ ಸಹ ತಮ್ಮ 'ಸುವರ್ಣ ಯುಗ'ವನ್ನು ಹೊಂದಿದ್ದವು. ತಯಾರಾದ ಚಿತ್ರಗಳ ಪೈಕಿ ವ್ಯವಹಾರಿಕವಾಗಿ ಯಶಸ್ಸು ಕಾಣುವ ಚಿತ್ರಗಳ ಸಂಖ್ಯೆಯಲ್ಲಿ ಬೆಳವಣಿಗೆಯಾಗುವುದನ್ನು ವ್ಯಾಪಾರೀ ತಮಿಳು ಚಿತ್ರರಂಗವು ಕಂಡುಕೊಂಡಿತು. ಆ ಕಾಲದ ತಮಿಳು ಚಿತ್ರರಂಗದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಒ. ಉ. ರಾಮಚಂದ್ರನ್, ಶಿವಾಜಿ ಗಣೇಶನ್, ಒ. ನಂಬಿಯಾರ್, ಅಶೋಕನ್ ಮತ್ತು ನಾಗೇಶ್ ಮೊದಲಾದವರು ಸೇರಿದ್ದರು. ಜಿ. ಶಾಂತಾರಾಂರಂಥ ಮರಾಠಿ ಭಾಷೆಯ ಕೆಲವೊಂದು ನಿರ್ದೇಶಕರು ನಂತರದಲ್ಲಿ ಮುಖ್ಯವಾಹಿನಿಯ ಹಿಂದಿ ಚಲನಚಿತ್ರಗಳ 'ಸುವರ್ಣ ಯುಗ'ದಲ್ಲಿ ನಿರ್ದಿಷ್ಟವಾಗಿ ಸಾಧನಭೂತವಾದ ಪಾತ್ರವನ್ನು ವಹಿಸುವುದರೊಂದಿಗೆ, ಈ ಕಾಲದಲ್ಲಿನ 'ಸುವರ್ಣ ಯುಗ'ವೊಂದರಲ್ಲಿ ಮರಾಠಿ ಚಿತ್ರರಂಗವೂ ಸಹ ತನ್ನ ಆಗಮನವನ್ನು ಸೂಚಿಸಿತು. ನೀಚಾ ನಗರ್ ಎಂಬ ಚೇತನ್ ಆನಂದ್ರ ಸಾಮಾಜಿಕ ವಾಸ್ತವಿಕತಾವಾದಿ ಚಲನಚಿತ್ರವು ಮೊದಲ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಮಹಾನ್ ಬಹುಮಾನವನ್ನು ಗೆದ್ದಂದಿನಿಂದ ಈಚೆಗೆ, ೧೯೫೦ರ ದಶಕ ಮತ್ತು ೧೯೬೦ರ ದಶಕದ ಆರಂಭದಲ್ಲಿನ ಹೆಚ್ಚೂಕಮ್ಮಿ ಪ್ರತಿವರ್ಷವೂ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿನ ಪಾಮೆ ಡಿ'ಓರ್ ಪ್ರಶಸ್ತಿಗಾಗಿ ಭಾರತೀಯ ಚಲನಚಿತ್ರಗಳು ಮೇಲಿಂದಮೇಲೆ ಸ್ಪರ್ಧೆಯಲ್ಲಿದ್ದವು ಹಾಗೂ ಅವುಗಳ ಪೈಕಿ ಅನೇಕ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರಮುಖ ಬಹುಮಾನಗಳನ್ನು ತಮ್ಮದಾಗಿಸಿಕೊಂಡವು. ಸತ್ಯಜಿತ್ ರೇ ಕೂಡಾ ತಮ್ಮ ದಿ ಅಪು ಟ್ರೈಲಜಿ ಯ ಎರಡನೇ ಭಾಗವಾದ ಅಪರಾಜಿತೊ (೧೯೫೬) ಚಿತ್ರಕ್ಕಾಗಿ ವೆನಿಸ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿಯನ್ನೂ, ಮತ್ತು ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್ಹಾಗೂ ಎರಡು ಸಂಖ್ಯೆಯಲ್ಲಿ ಅತ್ಯುತ್ತಮ ನಿರ್ದೇಶಕನಿಗಾಗಿರುವ ಗೋಲ್ಡನ್ ಬೇರ್ಸ್ ಪ್ರಶಸ್ತಿಗಳನ್ನು ಗೆದ್ದರು. ರೇಯವರ ಸಮಕಾಲೀನರಾದ ಋತ್ವಿಕ್ ಘಾಟಕ್ ಹಾಗೂ ಗುರುದತ್ರನ್ನು ಅವರದೇ ಜೀವಿತಾವಧಿಗಳಲ್ಲಿ ಉಪೇಕ್ಷಿಸಲಾಯಿತಾದರೂ, ಬಹಳ ಕಾಲದ ನಂತರ ೧೯೮೦ರ ದಶಕ ಹಾಗೂ ೧೯೯೦ರ ದಶಕಗಳಲ್ಲಿ ತಡವಾಗಿ ಅಂತರರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿದರು. ರೇಯವರನ್ನು ೨೦ನೇ ಶತಮಾನದ ಚಿತ್ರರಂಗದ ಮಹಾನ್ ಮೂಲಪುರುಷ ಅಥವಾ ನಿರ್ಮಾತೃಗಳ ಪೈಕಿ ಒಬ್ಬರೆಂದು ಪರಿಗಣಿಸಲಾಗಿದ್ದರೆ, ದತ್ ಮತ್ತು ಘಾಟಕ್ರನ್ನು ಕೂಡಾ ಸಾರ್ವಕಾಲಿಕವಾದ ಮಹಾನ್ ಚಲನಚಿತ್ರ ತಯಾರಕರ ಗುಂಪಿನಲ್ಲಿ ಪರಿಗಣಿಸಲಾಗಿದೆ. ೧೯೯೨ರಲ್ಲಿ, ಸೈಟ್ & ಸೌಂಡ್ ನ ವಿಮರ್ಶಕರ ಮತಾಭಿಪ್ರಾಯವು ತನ್ನ ಸಾರ್ವಕಾಲಿಕವಾದ "ಅತ್ಯುನ್ನತ ೧೦ ನಿರ್ದೇಶಕರ" ಪಟ್ಟಿಯಲ್ಲಿ ಸತ್ಯಜಿತ್ ರೇಯವರಿಗೆ #೭ನೇ ಶ್ರೇಯಾಂಕವನ್ನು ನೀಡಿದ್ದರೆ, ಮಹಾನ್ ನಿರ್ದೇಶಕರ ಕುರಿತಾದ ೨೦೦೨ರ ಸೈಟ್ & ಸೌಂಡ್ ಮತಾಭಿಪ್ರಾಯದಲ್ಲಿ ದತ್ಗೆ #೭೩ರ ಶ್ರೇಯಾಂಕವನ್ನು ನೀಡಲಾಯಿತು. ಹಲವಾರು ವಿಮರ್ಶಕರಿಂದ ಮತ್ತು ನಿರ್ದೇಶಕರಿಂದ ಪಡೆಯಲಾದ ಅಭಿಪ್ರಾಯ ಸಂಗ್ರಹಣೆಯಲ್ಲಿನ ಸಾರ್ವಕಾಲಿಕ ಮಹಾನ್ ಚಲನಚಿತ್ರಗಳ ಪೈಕಿ ಈ ಯೂಗಕ್ಕೆ ಸೇರಿದ ಹಲವಾರು ಭಾರತೀಯ ಚಲನಚಿತ್ರಗಳು ಅನೇಕ ಬಾರಿ ಸೇರಿಸಲ್ಪಟ್ಟಿವೆ. ಸತ್ಯಜಿತ್ ರೇಯವರ ಹಲವಾರು ಚಲನಚಿತ್ರಗಳು ಸೈಟ್ & ಸೌಂಡ್ ವಿಮರ್ಶಕರ ಜನಮತ ಸಂಗ್ರಹದಲ್ಲಿ ಕಾಣಿಸಿಕೊಂಡಿದ್ದು, ದಿ ಅಪು ಟ್ರೈಲಜಿ (ಒಂದು ವೇಳೆ ಮತಗಳನ್ನು ಸಂಯೋಜಿಸುವುದಾದರೆ ೧೯೯೨ರಲ್ಲಿ #೪ನೇ ಶ್ರೇಯಾಂಕವನ್ನು ಪಡೆಯಿತು), ದಿ ಮ್ಯೂಸಿಕ್ ರೂಂ (೧೯೯೨ರಲ್ಲಿ #೨೭ನೇ ಶ್ರೇಯಾಂಕವನ್ನು ಪಡೆಯಿತು), ಚಾರುಲತಾ (೧೯೯೨ರಲ್ಲಿ #೪೧ನೇ ಶ್ರೇಯಾಂಕವನ್ನು ಪಡೆಯಿತು)ಹಾಗೂ ಡೇಸ್ ಅಂಡ್ ನೈಟ್ಸ್ ಇನ್ ದಿ ಫಾರೆಸ್ಟ್ (೧೯೮೨ರಲ್ಲಿ #೮೧ನೇ ಶ್ರೇಯಾಂಕವನ್ನು ಪಡೆಯಿತು)ಚಿತ್ರಗಳು ಅದರಲ್ಲಿ ಸೇರಿದ್ದವು. ೨೦೦೨ರ ಸೈಟ್ & ಸೌಂಡ್ ವಿಮರ್ಶಕರ ಮತ್ತು ನಿರ್ದೇಶಕರ ಅಭಿಪ್ರಾಯ ಸಂಗ್ರಹವು ಕೂಡಾ, ಗುರುದತ್ ಚಲನಚಿತ್ರಗಳಾದ ಪ್ಯಾಸಾ ಮತ್ತು ಕಾಗಜ್ ಕೆ ಫೂಲ್ (ಎರಡೂ ಚಿತ್ರಗಳು #೧೬೦ನೇ ಶ್ರೇಯಾಂಕದಲ್ಲಿ ಸಮಸ್ಥಾನದಲ್ಲಿದ್ದವು), ಋತ್ವಿಕ್ ಘಾಟಕ್ ಚಲನಚಿತ್ರಗಳಾದ ಮೇಘೆ ಧಕಾ ತಾರಾ (#೨೩೧ನೇ ಶ್ರೇಯಾಂಕವನ್ನು ಪಡೆಯಿತು) ಮತ್ತು ಕೋಮಲ್ ಗಾಂಧಾರ್ (#೩೪೬ನೇ ಶ್ರೇಯಾಂಕವನ್ನು ಪಡೆಯಿತು) ಚಿತ್ರಗಳನ್ನು ಒಳಗೊಂಡಿತ್ತು, ಮತ್ತು ರಾಜ್ ಕಪೂರ್ರ ಆವಾರಾ , ವಿಜಯ್ ಭಟ್ರ ಬೈಜು ಬಾವ್ರಾ , ಮೆಹಬೂಬ್ ಖಾನ್ರ ಮದರ್ ಇಂಡಿಯಾ ಮತ್ತು ಏ. ಆಸಿಫ್ರ ಮುಘಲ್-ಎ-ಅಜಮ್ ಈ ಎಲ್ಲಾ ಚಿತ್ರಗಳೂ #೩೪೬ನೇ ಶ್ರೇಯಾಂಕದಲ್ಲಿ ಸಮಸ್ಥಾನದಲ್ಲಿದ್ದವು. ೧೯೯೮ರಲ್ಲಿ, ಏಷ್ಯಾದ ಚಲನಚಿತ್ರ ನಿಯತಕಾಲಿಕವಾದ ಸಿನಿಮಾಯಾ ದಿಂದ ನಡೆಸಲ್ಪಟ್ಟ ವಿಮರ್ಶಕರ ಜನಾಭಿಪ್ರಾಯ ಸಂಗ್ರಹದಲ್ಲಿ, ದಿ ಅಪು ಟ್ರೈಲಜಿ (ಒಂದು ವೇಳೆ ಮತಗಳನ್ನು ಸಂಯೋಜಿಸುವುದಾದರೆ #೧ನೇ ಶ್ರೇಯಾಂಕವನ್ನು ಪಡೆದವು), ರೇಯವರ ಚಾರುಲತಾ ಮತ್ತು ದಿ ಮ್ಯೂಸಿಕ್ ರೂಂ (ಎರಡೂ ಸಹ #೧೧ನೇ ಶ್ರೇಯಾಂಕದಲ್ಲಿ ಸಮಸ್ಥಾನದಲ್ಲಿದ್ದವು), ಮತ್ತು ಘಾಟಕ್ರ ಸುಬರ್ಣರೇಖಾ (ಇದು ಕೂಡಾ #೧೧ನೇ ಶ್ರೇಯಾಂಕದಲ್ಲಿ ಸಮಸ್ಥಾನದಲ್ಲಿತ್ತು) ಚಿತ್ರಗಳು ಸೇರಿದ್ದವು.[೪೬] ೧೯೯೯ರಲ್ಲಿ, ದಿ ವಿಲೇಜ್ ವಾಯ್ಸ್ ನ ಅತ್ಯುನ್ನತ ೨೫೦ "ಶತಮಾನದ ಅತ್ಯುತ್ತಮ ಚಲನಚಿತ್ರ"ಗಳಿಗೆ ಸಂಬಂಧಿಸಿದ ವಿಮರ್ಶಕರ ಜನಾಭಿಪ್ರಾಯ ಸಂಗ್ರಹವೂ ಸಹ ದಿ ಅಪು ಟ್ರೈಲಜಿ ಯನ್ನು (ಒಂದು ವೇಳೆ ಮತಗಳನ್ನು ಸಂಯೋಜಿಸುವುದಾದರೆ ಇದು #೫ನೇ ಶ್ರೇಯಾಂಕದಲ್ಲಿತ್ತು) ಒಳಗೊಂಡಿತ್ತು. ೨೦೦೫ರಲ್ಲಿ, ದಿ ಅಪು ಟ್ರೈಲಜಿ ಮತ್ತು ಪ್ಯಾಸಾ ಚಿತ್ರಗಳು ಟೈಮ್ ನಿಯತಕಾಲಿಕದ "ಸಾರ್ವಕಾಲಿಕ" ೧೦೦ ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯಲ್ಲಿಯೂ ಕಾಣಿಸಿಕೊಂಡವು. ಆಧುನಿಕ ಭಾರತೀಯ ಚಿತ್ರರಂಗ ಶ್ಯಾಮ್ ಬೆನೆಗಲ್ರಂಥ ಕೆಲವೊಂದು ಚಲನಚಿತ್ರ ತಯಾರಕರು ೧೯೭೦ರ ದಶಕದಾದ್ಯಂತ ವಾಸ್ತವಿಕ ದೃಷ್ಟಿಕೋನದ ಸಮಾನಾಂತರ ಚಲನಚಿತ್ರದ ನಿರ್ಮಾಣವನ್ನು ಮುಂದುವರಿಸಿದರು. ಬಂಗಾಳಿ ಚಿತ್ರರಂಗದಲ್ಲಿನ ಸತ್ಯಜಿತ್ ರೇ, ಋತ್ವಿಕ್ ಘಾಟಕ್,ಮೃಣಾಲ್ ಸೇನ್, ಬುದ್ಧದೇಬ್ ದಾಸ್ಗುಪ್ತಾ ಹಾಗೂ ಗೌತಮ್ ಘೋಷ್; ಮಲಯಾಳಂ ಚಿತ್ರರಂಗದಲ್ಲಿನ ಅಡೂರ್ ಗೋಪಾಲಕೃಷ್ಣನ್, ಜಾನ್ ಅಬ್ರಹಾಂ ಹಾಗೂ ಉ. ಅರವಿಂದನ್; ಮತ್ತು ಹಿಂದಿ ಚಿತ್ರರಂಗದಲ್ಲಿನ ಮಣಿಕೌಲ್, ಕುಮಾರ್ ಶಹಾನಿ,ಕೇತನ್ ಮೆಹ್ತಾ, ಗೋವಿಂದ ನಿಹಲಾನಿ ಹಾಗೂ ವಿಜಯ ಮೆಹ್ತಾ ಮೊದಲಾದವರು ಇದೇ ನೆಲೆಗಟ್ಟಿನಲ್ಲಿ ಜೊತೆಜೊತೆಯಾಗಿಯೇ ಚಿತ್ರಗಳನ್ನು ನಿರ್ಮಿಸಿದರು. ಆದಾಗ್ಯೂ, ೧೯೭೬ರಲ್ಲಿ ನಡೆದ ಸಾರ್ವಜನಿಕ ಉದ್ಯಮಗಳ ವಿಚಾರಣೆಯ ಮೇಲಿನ ಸಮಿತಿಯೊಂದರ ಅವಧಿಯಲ್ಲಿ, 'ಕಲಾತ್ಮಕ ಚಲನಚಿತ್ರ'ಗಳೆಡೆಗಿನ ಚಲನಚಿತ್ರ ಹಣಕಾಸು ನಿಗಮದ ಮರ್ಜಿ ಅಥವಾ ಪ್ರವೃತ್ತಿಯು ಟೀಕೆಗೊಳಗಾಯಿತು. ವ್ಯಾಪಾರಿ ಚಲನಚಿತ್ರಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡದಿರುವುದಕ್ಕಾಗಿ ಈ ಘಟಕವು ದೂಷಣೆಗೆ ಗುರಿಯಾಯಿತು. ಅದೇನೇ ಇದ್ದರೂ, ಓರ್ವ ಪ್ರಮುಖ ನಟನಾಗಿ ಅಮಿತಾಬ್ ಬಚ್ಚನ್ನ ಸ್ಥಾನವನ್ನು ಗಟ್ಟಿಗೊಳಿಸಿದ ಷೋಲೆ ಯಂಥ (೧೯೭೫) ಬಾಳಿಕೆಬರುವ ಚಲನಚಿತ್ರಗಳ ಸ್ವರೂಪದಲ್ಲಿ, ವ್ಯಾಪಾರಿ ಚಲನಚಿತ್ರಗಳ ಹುಟ್ಟುವಿಕೆಯನ್ನು ೧೯೭೦ರ ದಶಕವು ಕಂಡಿತು. ಜೈ ಸಂತೋಷಿ ಮಾ ಎಂಬ ಭಕ್ತಿಪೂರ್ವಕ ಮೇರುಚಿತ್ರವೂ ೧೯೭೫ರಲ್ಲಿ ಬಿಡುಗಡೆಯಾಯಿತು. ಸಲೀಂ-ಜಾವೇದ್ರ ಕಥೆ ಹಾಗೂ ಯಶ್ ಚೋಪ್ರಾರ ನಿರ್ದೇಶನವನ್ನು ಹೊಂದಿದ್ದ ದೀವಾರ್ ಚಿತ್ರವು ೧೯೭೫ರಲ್ಲಿ ಬಿಡುಗಡೆಯಾದ ಮತ್ತೊಂದು ಪ್ರಮುಖ ಚಲನಚಿತ್ರವಾಗಿತ್ತು. "ಕಳ್ಳಸಾಗಣೆದಾರನಾಗಿದ್ದ ಹಾಜಿ ಮಸ್ತಾನ್ನ ನಿಜಜೀವನವನ್ನು ಆಧರಿಸಿದ್ದ, ದುಷ್ಕೃತ್ಯಗಳ ಪಟಾಲಂನ ಓರ್ವ ನಾಯಕನಾಗಿರುವ ತನ್ನ ಸೋದರನ ವಿರುದ್ಧವಾಗಿ ಓರ್ವ ಆರಕ್ಷಕ ಅಧಿಕಾರಿಯು ಹೋರಾಟಕ್ಕೆ ಇಳಿಯುವುದನ್ನು" ಒಳಗೊಂಡಿದ್ದ ಒಂದು ಅಪರಾಧ ಚಲನಚಿತ್ರ ಇದಾಗಿತ್ತು. ಅಮಿತಾಬ್ ಬಚ್ಚನ್ನನ್ನು ಸದರಿ ಕಳ್ಳಸಾಗಣೆದಾರನ ಪಾತ್ರದಲ್ಲಿ ಚಿತ್ರಿಸಿದ್ದ ಈ ದೀವಾರ್ ಚಿತ್ರವನ್ನು ಡ್ಯಾನಿ ಬೋಯ್ಲ್ ಎಂಬಾತ "ಇದು ಭಾರತೀಯ ಚಿತ್ರರಂಗಕ್ಕೆ ನಿಶ್ಚಯವಾಗಿ ಒಂದು ಅತ್ಯಂತ ಮಹತ್ವದ ಕೊಡುಗೆ" ಎಂದು ವರ್ಣಿಸಿದ. ಮಿಸ್ಟರ್ ಇಂಡಿಯಾ (೧೯೮೭), ಕಯಾಮತ್ ಸೆ ಕಯಾಮತ್ ತಕ್ (೧೯೮೮), ತೇಜಾಬ್ (೧೯೮೮), ಚಾಂದನಿ (೧೯೮೯), ಮೈನೆ ಪ್ಯಾರ್ ಕಿಯಾ (೧೯೮೯), ಬಾಝಿಗರ್ (೧೯೯೩), ಡರ್ (೧೯೯೩), ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೇ(೧೯೯೫) ಮತ್ತು ಕುಚ್ ಕುಚ್ ಹೋತಾ ಹೈ ನಂಥ (೧೯೯೮) ಚಲನಚಿತ್ರಗಳು ಬಿಡುಗಡೆಯಾಗುವುದರೊಂದಿಗೆ ವ್ಯಾಪಾರಿ ಚಲನಚಿತ್ರರಂಗವು ೧೯೮೦ರ ದಶಕ ಮತ್ತು ೧೯೯೦ರ ದಶಕಗಳಾದ್ಯಂತ ಮತ್ತಷ್ಟು ಬೆಳೆಯಿತು. ಇವುಗಳ ಪೈಕಿ ಬಹುತೇಕ ಚಿತ್ರಗಳುಆಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ರಂಥ ತಾರೆಯರನ್ನು ಒಳಗೊಂಡಿದ್ದವು. ಮಣಿರತ್ನಂರಿಂದ ನಿರ್ದೇಶಿಸಲ್ಪಟ್ಟ ಚಲನಚಿತ್ರಗಳು ಭಾರತದ ಕಲ್ಪನೆಯನ್ನು ಸಮರ್ಥವಾಗಿ ಹಿಡಿದಿಟ್ಟ ಕಾರಣದಿಂದಾಗಿ, ೧೯೯೦ರ ದಶಕದಲ್ಲಿ ತಮಿಳು ಚಿತ್ರರಂಗದ ರಾಷ್ಟ್ರೀಯ ಜನಪ್ರಿಯತೆಯಲ್ಲಿ ಒಂದು ಹೆಚ್ಚಳವು ಕಂಡುಬಂದಿತು. ಇಂಥ ಚಲನಚಿತ್ರಗಳಲ್ಲಿ ರೋಜಾ (೧೯೯೨) ಮತ್ತು ಬಾಂಬೆ (೧೯೯೫) ಸೇರಿದ್ದವು. ಕಮಲಹಾಸನ್ ನಟಿಸಿದ್ದ ರತ್ನಂರ ಹಿಂದಿನ ಚಲನಚಿತ್ರವಾದ ನಾಯಗನ್ (೧೯೮೭), ಟೈಮ್ ನಿಯತಕಾಲಿಕದ "ಸಾರ್ವಕಾಲಿಕ" ೧೦೦ ಅತ್ಯುತ್ತಮ ಚಲನಚಿತ್ರಗಳು ಪಟ್ಟಿಯಲ್ಲಿ ಸೇರಿಸಲ್ಪಟ್ಟಿತ್ತು. ಇದರ ಜೊತೆಜೊತೆಗಿದ್ದ ನಾಲ್ಕು ಮುಂಚಿನ ಭಾರತೀಯ ಚಲನಚಿತ್ರಗಳೆಂದರೆ: ಸತ್ಯಜಿತ್ ರೇಯವರ ದಿ ಅಪು ಟ್ರೈಲಜಿ (೧೯೫೫?೧೯೫೯) ಮತ್ತು ಗುರುದತ್ರವರ ಪ್ಯಾಸಾ (೧೯೫೭). ಮತ್ತೋರ್ವ ತಮಿಳು ನಿರ್ದೇಶಕರಾದ ಶಂಕರ್ ಕಾದಲನ್ ಎಂಬ ತಮ್ಮ ಚಲನಚಿತ್ರದ ಮೂಲಕ ಸಂಚಲನೆಯನ್ನೇ ಸೃಷ್ಟಿಸಿದರು. ಈ ಚಿತ್ರದ ಸಂಗೀತ ಹಾಗೂ ನಟ ಪ್ರಭುದೇವನ ನೃತ್ಯಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದವು. ದಕ್ಷಿಣ ಭಾರತೀಯ ಚಲನಚಿತ್ರೋದ್ಯಮವು ಕೇವಲ ರಾಷ್ಟ್ರೀಯ ಆಕರ್ಷಣೆಯ ಚಲನಚಿತ್ರವನ್ನಷ್ಟೇ ಅಲ್ಲದೇ ಬಹುಸಾಂಸ್ಕೃತಿಕ ಸಂಗೀತವನ್ನು ಕೂಡಾ ಒಳಗೊಂಡಿತ್ತು. ಇದು ರಾಷ್ಟ್ರಮಟ್ಟದ ಭಾರತೀಯ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆಯಲು ಕಾರಣವಾಯಿತು. ರಹಮಾನ್ ಮತ್ತು ಇಳಯರಾಜಾರಂಥ ತಮಿಳಿನ ಕೆಲವೊಂದು ಫಿಲ್ಮೀ ಸಂಗೀತ ಸಂಯೋಜಕರು ಅಂದಿನಿಂದಲೂ ಒಂದು ಬೃಹತ್ ಪ್ರಮಾಣದ ರಾಷ್ಟ್ರೀಯ ಮತ್ತು ನಂತರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಭಿಮಾನಿವೃಂದವನ್ನು ಹೊಂದಿದ್ದಾರೆ. ರಹಮಾನ್ರ ಪ್ರಥಮ ಪರಿಚಯದ ರೋಜಾ ಚಿತ್ರಕ್ಕೆ ಸಂಬಂಧಿಸಿದ ಧ್ವನಿಪಥವು ಟೈಮ್ ನಿಯತಕಾಲಿಕದ ಸಾರ್ವಕಾಲಿಕ "೧೦ ಅತ್ಯುತ್ತಮ ಧ್ವನಿಪಥಗಳಲ್ಲಿ" ಸೇರಿಸಲ್ಪಟ್ಟಿತು ಹಾಗೂ ಕಾಲಾನಂತರದಲ್ಲಿ ತಮ್ಮ ಅಂತರರಾಷ್ಟ್ರೀಯ ಮಟ್ಟದ ಚಿತ್ರವಾದ ಸ್ಲಂಡಾಗ್ ಮಿಲಿಯನೇರ್ (೨೦೦೮) ಧ್ವನಿಪಥಕ್ಕಾಗಿ ಅವರು ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದರು. ತಬರನ ಕಥೆ ಎಂಬ ಕನ್ನಡ ಚಲನಚಿತ್ರವೊಂದು, ತಾಷ್ಕೆಂಟ್, ನಾಂಟೆಸ್, ಟೋಕಿಯೋ, ಹಾಗೂ ರಷ್ಯಾದ ಚಲನಚಿತ್ರೋತ್ಸವವೂ ಸೇರಿದಂತೆ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು. ಭಾರತೀಯ ಚಿತ್ರರಂಗದ ಸುವರ್ಣ ಯುಗದ ಬಹುಕಾಲದ ನಂತರ, ದಕ್ಷಿಣ ಭಾರತದ ಕೇರಳದ ಮಲಯಾಳಂ ಚಿತ್ರರಂಗವು ೧೯೮೦ರ ದಶಕ ಹಾಗೂ ೧೯೯೦ರ ದಶಕದ ಆರಂಭದಲ್ಲಿ ತನ್ನದೇ ಆದ 'ಸುವರ್ಣ ಯುಗ'ವನ್ನು ಕಂಡುಕೊಂಡಿತು. ಆ ಸಮಯದಲ್ಲಿದ್ದ ಅತ್ಯಂತ ಮೆಚ್ಚುಗೆ ಪಡೆದ ಭಾರತದ ಚಲನಚಿತ್ರ ತಯಾರಕರ ಪೈಕಿ ಕೆಲವೊಬ್ಬರು ಮಲಯಾಳಂ ಚಿತ್ರರಂಗದಿಂದ ಬಂದವರಾಗಿದ್ದರು. ಅಡೂರ್ ಗೋಪಾಲಕೃಷ್ಣನ್, ಉ. ಅರವಿಂದನ್, ಖಿ. ಗಿ. ಚಂದ್ರನ್ಹಾಗೂ ಷಾಜಿ ಓ. ಕರುಣ್ ಮೊದಲಾದವರು ಇವರಲ್ಲಿ ಸೇರಿದ್ದಾರೆ. ಸತ್ಯಜಿತ್ ರೇಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಎಂದೇ ಅನೇಕಬಾರಿ ಪರಿಗಣಿಸಲಾಗಿರುವ ಅಡೂರ್ ಗೋಪಾಲಕೃಷ್ಣನ್, ಅತ್ಯಂತ ಮೆಚ್ಚುಗೆಯನ್ನು ಪಡೆದ ತಮ್ಮ ಚಲನಚಿತ್ರಗಳ ಪೈಕಿ ಕೆಲವನ್ನು ಈ ಅವಧಿಯಲ್ಲಿ ನಿರ್ದೇಶಿಸಿದರು. ಲಂಡನ್ ಚಲನಚಿತ್ರೋತ್ಸವದಲ್ಲಿ ಸುದರ್ಲೆಂಡ್ ಪ್ರಶಸ್ತಿಯನ್ನು ಗೆದ್ದ ಎಲಿಪ್ಪತಾಯಮ್ (೧೯೮೧) ಎಂಬ ಚಿತ್ರವಷ್ಟೇ ಅಲ್ಲದೇ, ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಮುಖ ಬಹುಮಾನಗಳನ್ನು ಗೆದ್ದ ಮಥಿಲುಕಳ್(೧೯೮೯) ಚಿತ್ರವೂ ಇವುಗಳಲ್ಲಿ ಸೇರಿವೆ. ಷಾಜಿ ಓ. ಕರುಣ್ರ ಪ್ರಥಮ ಪ್ರವೇಶದ ಚಲನಚಿತ್ರವಾದ ಪಿರವಿ ಯು (೧೯೮೯) ೧೯೮೯ರ ಕ್ಯಾನೆಸ್ ಚಲನಚಿತ್ರೋತ್ಸವಗಳಲ್ಲಿ ಕ್ಯಾಮೆರಾ ಡಿ'ಓರ್ ಪ್ರಶಸ್ತಿಯನ್ನು ಗೆದ್ದರೆ, ಅವರ ಎರಡನೇ ಚಿತ್ರವಾದ ಸ್ವಾಹಂ(೧೯೯೪) ೧೯೯೪ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿನ ಪಾಮೆ ಡಿ'ಓರ್ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿತ್ತು. ನಾಯಗನ್ ಚಿತ್ರದಲ್ಲಿ ವೇಲು ನಾಯಕರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಮಲಹಾಸನ್; ಟೈಮ್ ನಿಯತಕಾಲಿಕದ "ಸಾರ್ವಕಾಲಿಕ" ೧೦೦ ಅತ್ಯುತ್ತಮ ಚಲನಚಿತ್ರಗಳಲ್ಲಿ ಈ ಚಿತ್ರವನ್ನು ಸೇರಿಸಲಾಗಿತ್ತು. ೧೯೯೦ರ ದಶಕದ ಅಂತ್ಯದಲ್ಲಿ, 'ಸಮಾನಾಂತರ ಚಲನಚಿತ್ರ'ವು ಹಿಂದಿ ಚಿತ್ರರಂಗದಲ್ಲಿನ ಒಂದು ಪುನರ್ಜಾಗೃತಿಯನ್ನು ಅನುಭವಕ್ಕೆ ತಂದುಕೊಳ್ಳಲು ಶುರುಮಾಡಿತು.ಸತ್ಯ (೧೯೯೮) ಎಂಬ ಚಿತ್ರದ ವಿಮರ್ಶಾತ್ಮಕ ಹಾಗೂ ವ್ಯಾವಹಾರಿಕ ಯಶಸ್ಸು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಿತ್ತು. ಮುಂಬಯಿ ಭೂಗತಲೋಕವನ್ನು ಆಧರಿಸಿದ್ದ ಈ ಕಡಿಮೆ-ಬಂಡವಾಳದ ಚಲನಚಿತ್ರಕ್ಕೆ ಅನುರಾಗ್ ಕಾಶ್ಯಪ್ ಕಥೆಯನ್ನು ಬರೆದಿದ್ದು, ರಾಂ ಗೋಪಾಲ್ ವರ್ಮಾನಿಂದ ಅದು ನಿರ್ದೇಶಿಸಲ್ಪಟ್ಟಿತ್ತು.ಮುಂಬಯಿ ನಾಯ್ರ್ ಎಂದು ಕರೆಯಲಾಗುವ, ಮುಂಬಯಿ ನಗರದ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ನಗರದ ಚಲನಚಿತ್ರಗಳ ಒಂದು ವಿಭಿನ್ನ-ವಿಶಿಷ್ಟ ಶೈಲಿಯು ಹುಟ್ಟಿಕೊಳ್ಳಲು ಈ ಚಲನಚಿತ್ರದ ಯಶಸ್ಸು ದಾರಿಮಾಡಿಕೊಟ್ಟಿತು. ಮುಂಬಯಿ ನಾಯ್ರ್ ಚಲನಚಿತ್ರ ಶೈಲಿಗೆ ಸೇರ್ಪಡೆಯಾಗುವ ಲಕ್ಷಣವನ್ನು ಹೊಂದಿದ್ದ ನಂತರದ ಚಲನಚಿತ್ರಗಳಲ್ಲಿ, ಮಧುರ್ ಭಂಡಾರ್ಕರ್ನ ಚಾಂದನಿ ಬಾರ್ (೨೦೦೧) ಹಾಗೂ ಟ್ರಾಫಿಕ್ ಸಿಗ್ನಲ್ (೨೦೦೭), ರಾಂ ಗೋಪಾಲ್ ವರ್ಮಾನ ಕಂಪನಿ (೨೦೦೨) ಹಾಗೂ ಅದರ ಘಟನೆಗಳನ್ನೇ ಹೊಂದಿರುವ ಆ (೨೦೦೫), ಅನುರಾಗ್ ಕಾಶ್ಯಪ್ನ ಬ್ಲ್ಯಾಕ್ ಫ್ರೈಡೆ (೨೦೦೪), ಮತ್ತು ಇರ್ಫಾನ್ ಕಮಲ್ನ ಥ್ಯಾಂಕ್ಸ್ ಮಾ (೨೦೦೯) ಚಿತ್ರಗಳು ಸೇರಿವೆ. ಇಂದಿಗೂ ಸಕ್ರಿಯರಾಗಿರುವ ಇತರ ಕಲಾತ್ಮಕ ಚಲನಚಿತ್ರ ನಿರ್ದೇಶಕರ ವಿವರ ಹೀಗಿದೆ: ಬಂಗಾಳಿ ಚಿತ್ರರಂಗದಲ್ಲಿನ ಮೃಣಾಲ್ ಸೇನ್, ಬುದ್ಧದೇಬ್ ದಾಸ್ಗುಪ್ತಾ, ಗೌತಮ್ ಘೋಷ್,ಸಂದೀಪ್ ರೇ, ಅಪರ್ಣಾ ಸೇನ್ ಮತ್ತು ರಿತುಪರ್ಣೋ ಘೋಷ್; ಮಲಯಾಳಂ ಚಿತ್ರರಂಗದಲ್ಲಿನ ಅಡೂರ್ ಗೋಪಾಲಕೃಷ್ಣನ್, ಷಾಜಿ ಓ. ಕರುಣ್ ಮತ್ತು ಕ.ಚಂದ್ರನ್; ಹಿಂದಿ ಚಿತ್ರರಂಗದಲ್ಲಿನ ಮಣಿಕೌಲ್, ಕುಮಾರ್ ಶಹಾನಿ, ಕೇತನ್ ಮೆಹ್ತಾ,ಗೋವಿಂದ ನಿಹಲಾನಿ, ಶ್ಯಾಮ್ ಬೆನೆಗಲ್, ಮೀರಾ ನಾಯರ್, ನಾಗೇಶ್ ಕುಕುನೂರ್, ಸುಧೀರ್ ಮಿಶ್ರಾ ಮತ್ತು ನಂದಿತಾ ದಾಸ್; ತಮಿಳು ಚಿತ್ರರಂಗದಲ್ಲಿನ ಮಣಿರತ್ನಂ ಮತ್ತು ಸಂತೋಷ್ ಶಿವನ್ ಹಾಗೂ, ಭಾರತೀಯ ಇಂಗ್ಲಿಷ್ ಚಿತ್ರರಂಗದಲ್ಲಿನ ದೀಪಾ ಮೆಹ್ತಾ, ಅನಂತ್ ಬಲಾನಿ, ಹೋಮಿ ಅಡಾಜಾನಿಯಾ, ವಿಜಯ್ ಸಿಂಗ್ ಮತ್ತು ಸೂನಿ ತಾರಾಪೋರ್ವಾಲಾ.

2 comments:

  1. ನಿಮ್ಮ ಬರಹವನ್ನು ವಿಸ್ಮಯನಗರಿಯಲ್ಲಿ ಓದಿದೆ.. ಅಲ್ಲಿ ಪ್ರತಿಕ್ಯಿಯಿಸಲು ಆಗುತ್ತಿಲ್ಲ.ಅದ್ಕೆ ನಿಮ್ಮ ಬ್ಲಾಗ್ ಲಿಂಕ್ ಹಿಡಿದು ಅಲ್ಲಿಗೆ ಹೋದಾಗ ನೀವು ಚಿತ್ರರಂಗದ ಬಗ್ಗೆ ಚಿತ್ರಗಳ ನಿರ್ದೇಶಕರ ಬಗ್ಗೆ ಬರೆದದ್ದು ಓದಿ, ನಿಮಗೂ ಚಲನ ಚಿತ್ರಗಳ ಬಗ್ಗೆ ಒಲವಿದೆ ಆಸಕ್ತಿ ಇದೆ ಎಂದು ಅರಿವಾಗಿ ಸಮಾನ ಮನಸ್ಕಳೆಂದು ಗೂಗಲ್ ಸರ್ಕಲ್ಗೆ ಸೇರಿಸಿದೆ-ಇಲ್ಲಿ ಪ್ರತಿಕ್ರಿಯಿಸುತ್ತಿರುವೆ..
    ನಾನೂ ಕೆಲವು ಸಿನೆಮಾಗಳ ಬಗ್ಗೆ ಬರಹಗಳನ್ನು ವಿಸ್ಮಯನಗರಿ ಮತ್ತು
    www .sampada.net

    http://sampada.net/pages/list



    ಇಲ್ಲಿ ಬರೆದಿರುವೆ.. ಲಿಂಕ್ ಇದೆ ಗಮನಿಸಿ...
    ನೀವ್ ಬರಹಗಳನ್ನು ಬರೆವ ಶೈಲಿ ಆಪ್ತವಾಗಿದೆ.

    ಶುಭವಾಗಲಿ..

    ಸಪ್ತಗಿರಿವಾಸಿ-ವೆಂಕಟೇಶ ಮಡಿವಾಳ -ಬೆಂಗಳೂರು..

    ReplyDelete
  2. Spilt the writings into multiple paragraphs, otherwise it is difficult to read.
    odutta Kannu novu banthu....

    ReplyDelete