Thursday 28 March 2013

ಮೀರಾ ನಾಯರ್

ಸಿನಿಮಾ ಯಾನದ ಮೂಲಕ ಸಿನಿಮಾ ಜಗತ್ತಿಗೆ ಎಂದೂ ಮರೆಯಲಾಗದ ನೆನಪಿನ ಬುತ್ತಿಯನ್ನು ನೀಡಿದವರು ಮೀರಾ ನಾಯರ್. ಮೀರಾ ನಾಯರ್ ನ್ಯೂ ಯಾರ್ಕ್‌ನಲ್ಲಿ ನೆಲೆಸಿರುವ ಒಬ್ಬ ಪ್ರತಿಭಾನ್ವಿತ ನಿರ್ದೇಶಕಿ. ಈಕೆ ಹುಟ್ಟಿದ್ದು ಅಕ್ಟೋಬರ್ ೧೭ ೧೯೫೭ರಲ್ಲಿ. ನಿರ್ಮಾಕಿಯೂ ಆಗಿರುವ ಈಕೆಯ ಪ್ರೋಡಕ್ಷನ್ ಗ್ರೂಪ್ಸ್ ಹೆಸರು ಮೀರಾಬಾಯಿ ಫಿಲ್ಮ್ಸ್. ಮೀರಾ ನಾಯರ್ ದೆಹಲಿ ಹಾಗೂ ಹಾರ್‍ವರ್ರ್‍ಡ್ ವಿವಿ ಗಳಲ್ಲಿ ಶಿಕ್ಷಣವನ್ನು ಪಡೆದರು. ಈಕೆಯ ಕಲಾತ್ಮಕ ಚಿತ್ರ ಸಲಾಂ ಬಾಂಬೇ!(೧೯೮೮) ಕ್ಯಾನೆಸ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಗೋಲ್ಡನ್ ಕ್ಯಾಮೆರಾ ಪ್ರಶಸ್ತಿಯನ್ನು ಬಾಚಿಕೊಂಡಿದ್ದು ಮಾತ್ರವಲ್ಲದೆ ಅಕ್ಯಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಫಾರಿನ್ ಲಾಂಗ್ವೇಜ್ ಫಿಲಂಗೆ ಸ್ಪರ್ದಿಸುವ ಅವಕಾಶ ಪಡೆದುಕೊಂಡಿತು. ಮೀರಾ ನಾಯರ್ ಮುಂದೆ ಬೀದಿ ಮಕ್ಕಳ ಏಳಿಗೆಗೆ ಬೇಕಾಗಿ ನಿರ್ಮಿಸಿದ ಸಲಾಮ್ ಬಾಲಕ್ ಟ್ರಸ್ಟ್ ಎಂಬ ಎನ್‌ಜಿಓದ ಪಬ್ಲಿಸಿಟಿಗಾಗಿ ಈ ಸಿನಿಮಾವನ್ನು ಬಳಸಿಕೊಂಡರು. ಈಕೆ ಹಾರ್‍ವರ್‍ಡ್‌ನಲ್ಲಿದ್ದಾಗ ಪರಿಚಯವಾದ ಹೆಸರಾಂತ ರಂಗ ನಿರ್ದೇಶಕಿ, ಸಿನಿಮಾ ನಿರ್ದೆಶಕಿ ಸೂನಿ ತರಪೋರೆವಾಲಾ ಜೊತೆಗೂ ಬಹಳ ಸಮಯ ಕಾರ್ಯ ನಿರ್ವಹಿಸಿದ್ದರು. ಈಕೆ ತನ್ನ ಸೃಜನಶೀಲತೆಯಿಂದ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೇ. ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯಸಿನಿಮಾ ಪ್ರಶಸ್ತಿಗಳು ಮಡಿಲು ತುಂಬಿದ್ದಲ್ಲದೆ ಅಕಾಡೆಮೀ ಅವಾರ್ಡ್ಸ್, ಗೋಲ್ಡನ್ ಗ್ಲೋಬಸ್, ಬಿಎಎಫ್‌ಟಿಎ ಅವಾರ್ಡ್, ಫಿಲಂ ಫೇರ್ ಅವಾರ್ಡ್‌ಗಳಿಕೆ ನೇಮಕ ಗೊಂಡಿದ್ದರು. ೨೦೦೭ರ ಇಂಡಿಯಾ ಅಬ್ರಾಡ್ ಪರ್ಸನ್ ಪ್ರಶಸ್ತಿಗೂ ಕೂಡ ಈಕೆ ಭಾಜನಳಾಗಿದ್ದರು. ೨೦೧೨ರಲ್ಲಿ ರಾಷ್ಟ್ರಪತಿಗಳ ಕೈಯಿಂದ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದ ಹೆಮ್ಮೆ ಈಕೆಯದು. ಈಕೆ ಹುಟ್ಟಿದ್ದು ಒರಿಸ್ಸಾದ ರೌರ್‍ಕೇಲಾ ಎಂಬ ಪ್ರದೇಶದಲ್ಲ್ಲಿ. ತಂದೆ ಸರ್ಕಾರಿ ಉದ್ಯೋಗಿ. ಮದ್ಯಮವರ್ಗದ ಕುಟುಂಬದಲ್ಲಿ ಈಕೆಯೆ ಸಣ್ಣವಳು. ಈಕೆಯ ತಾಯಿ ಸಮಾಜ ಸೇವಕಿ.ಪಂಜಾಬ್ ಮೂಲದ ಈ ಕುಟುಂಬ ಅಮೃತಸರದಿಂದ ಈ ಪ್ರದೇಶಕ್ಕೆ ಬಂದಿದ್ದರು. ಶಿಮ್ಲಾದ ವಸತಿ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಮೀರಾ ನಾಯರ್ ಮುಂದೆ ದೆಹಲಿ ಮಿರಾಂದಾ ಹೌಸ್‌ನಲ್ಲಿ ಸಮಾಜಶಾಸ್ತ್ರದಲ್ಲಿ ತನ್ನ ಪದವಿಯನ್ನು ಪಡೆದುಕೊಂಡರು. ಅಲ್ಲಿ ಆಕೆ ಕೆಲವೊಂದು ಬೀದಿ ನಾಟಕಗಳ ತಂಡದಲ್ಲಿ ಸೇರಿಕೊಂಡು ೩ ವರ್ಷಗಳ ಕಾಲ ನಟರಾಗಿ ಕಾರ್ಯ ನಿರ್ವಹಿಸಿದರು. ಮುಂದೆ ತನ್ನ ೧೯ನೇ ವಯಸ್ಸಿನಲ್ಲಿ ಸ್ಕಾಲರ್ ಶಿಪ್ ಮೇಲೆ ಹೆಚ್ಚಿನ ಕಲಿಯುವಿಕೆಗಾಗಿ ಅಮೇರಿಕಾದ ಹಾರ್‍ವರ್ರ್‍ಡ್ ಯೂನಿವರ್ಸಿಟಿಗೆ ನಡೆದರು. ಅಲ್ಲೇ ಆಕೆ ತನ್ನ ಮೊದಲ ಗಂಡ ಫೋಟೋಗ್ರಫರ್ ಆದ ಮಿಚ್‌ಎಪ್‌ಸ್ಟೇನ್‌ನನ್ನು ಸಂಧಿಸಿದಳು ಮಾತ್ರವಲ್ಲ ಇಲ್ಲೆ ಆPಗೆ ಸಿನಿಮಾ ನಿರ್ದೆಶಕಿ ಸೂನಿ ತರಪೋರೆವಾಲಾಳ ಪರಿಚಯ ಕೂಡ ಆಗಿತ್ತು. ನಂತರ ಇದೇ ಪರಿಚಯಗಳು ಆಕೆಯನ್ನು ಡಾಕ್ಯುಮೆಮಟರಿಗಳ ನಿರ್ಮಾಣದತ್ತ ದೂಡಿದವು. ಪ್ರಾಥಮಿಕ ಹಂತದಲ್ಲಿ ಆಕೆ ಟೀವಿ ಡಾಕ್ಯುಮೆಮಟರಿಗಳ ನಿರ್ಮಾಣದಲ್ಲಿ ಆಸಕ್ತಿ ತೋರಿದರು. ತನ್ನ ವೃತ್ತಿಜೀವನದ ಆರಂಭದಲ್ಲಿ, ನಾಯರ್ ನಾಲ್ಕು ಟೆಲೆವಿಜನ್ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದರು.ಇದೇ ಸಂದರ್ಭದಲ್ಲಿ ನಿರ್ಮಿಸಿದ ಚಿತ್ರ ಇಂಡಿಯಾ ಕ್ಯಾಬರೇಟ್. ರಾತ್ರಿ ಕ್ಲಬ್‌ಗಳಲ್ಲಿ ಹೊಟ್ಟೆ ಪಾಡಿಗಾಗಿ ಕುಣಿಯುವ ನರ್ತಕಿಯರ ಜೀವನವನ್ನು ಚಿತ್ರಿಸಿದಂತಾ ಈ ಚಿತ್ರ ೧೯೮೬ರ ಅಮೇರಿಕನ್ ಚಲನಚಿತ್ರೋತ್ಸವದಲ್ಲಿ ಬ್ಲೂ ರಿಬ್ಬನ್ ಪ್ರಶಸ್ತಿ ಬಾಚಿಕೊಂಡಿತ್ತು. ಸೂನಿ ತಾರಾಪೊರೆವಾಲಾ ಜೊತೆಗೆ ಚಿತ್ರಿಸಿದ ಸಲಾಮ್ ಬಾಂಬೆ! (೧೯೮೮), ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿರುವ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಲ್ಲದೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇಂದು ಈ ಸಿನಿಮಾ ಒಂದು ಶ್ರೇಷ್ಠ ಸಿನಿಮಾ ಎಂದು ಪರಿಗಣಿಸಲಾಗುತ್ತದೆ, ಮತ್ತು ಚಲನಚಿತ್ರ ವಿದ್ಯಾರ್ಥಿಗಳಿಗೆ ಮೊದಲ ಪಾಠದಂತಿದೆ ಸಿನಿಮಾ. ೧೯೯೧ರಲ್ಲಿ ಮೀರಾರವರ ಡೆಂಜೆಲ್ ವಾಶಿಂಗ್ಟನ್ ಮತ್ತು ಸರಿತಾ ಚೌಧರಿ ನಟಿಸಿದ 'ಮಿಸ್ಸಿಸ್ಸಿಪಿ ಮಸಾಲಾ' ಚಿತ್ರವು ಬಿಡುಗಡೆಯಾಯಿತು. ಕೆಲಸಕ್ಕಾಗಿ ಸ್ಥಳಾಂತರಿತಗೊಂಡ ಉಗಾಂಡಾ-ಭಾರತೀಯ ಕುಟುಂಬ ಮಿಸ್ಸಿಸ್ಸಿಪ್ಪಿಯಲ್ಲಿ ಹೇಗೆ ಬದುಕುತ್ತಿದ್ದಾರೆ ಮತ್ತು ಅವರ ಜೀವನ ರೀತಿಗಳನ್ನು ಆಧರಿಸಿ ಚಿತ್ರಿಸಲಾಗಿತ್ತು. ಇಲ್ಲಿ ಮತ್ತೊಮ್ಮೆ ಸೂನಿ ತಾರಾಪೊರೆವಾಲಾರವರ ಚಿತ್ರಕಥೆ ಹಾಗೂ ಸಂಬಾಷಣೆಯನ್ನೊಳಗೊಂಡ ಸಿನಿಮಾ ಮೈಕೆಲ್ ನಾಝಿಕ್ ರವರ ನಿರ್ಮಾಣದೊಂದಿಗೆ ಮೂಡಿ ಬಂದಿತ್ತು. ಮುಂದೆ ಕಾಮಸೂತ್ರ:ಅ ಟೇಲ್ ಆಫ್ ಲವ್ ಎಂಬ ಸಿನಿಮಾ ನಿರ್ದೇಶಿಸಿದರು. ಇದೊಂದು ೧೬ ನೇ ಶತಮಾನದ ಭಾರತದ ಕಥಾನಕದ ಚಿತ್ರಣವಾಗಿತ್ತು. ಮುಂದೆ ೧೯೯೮ ರಲ್ಲಿ ಅವರು ನವೀನ್ ಆಂಡ್ರ್ಯೂಸ್ ಅಭಿನಯದ ಮೈ ಓನ್ ಕಂಟ್ರಿ ಸಿನಿಮಾ ನಿರ್ದೇಶಿಸಿದರು. ಇದರಲ್ಲಿ ಸ್ನೇಹಿತೆ ಸೂನಿ ತಾರಾಪೊರೆವಾಲಾ ಹಾಗೂ ಅಬ್ರಹಾಂ ವರ್ಗೀಸ್ ಅವರ ನೆನಪುಗಳನ್ನು ಅಳವಡಿಸಿಕೊಳ್ಳಲಾಗಿದ್ದು,ಹೆಚ್‌ಬಿಒ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬಂದಿದೆ. ೨೦೦೧ ರಲ್ಲಿ ಅವರು ಸಬ್ರಿನಾ ಧವನ್ ರ ಚಿತ್ರಕಥೆ ಹೊಂದಿರುವ ಮಾನ್ಸೂನ್ ವೆಡ್ಡಿಂಗ್ ಸಿನಿಮಾ ನಿರ್ದೇಶಿಸಿದರು. ಇದೊಂದು ಅಸ್ತವ್ಯಸ್ತವಾಗಿರುವ ಪಂಜಾಬಿ ಭಾರತೀಯ ಮದುವೆಯ ಬಗೆಗಿನ ಚಿತ್ರ, ಇದು ನಾಯರ್‌ಗೆ ವೆನಿಸ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿನ್ನ ತಮದು ಕೊಟ್ಟಿತು.ಮಾನ್ಸೂನ್ ವೆಡ್ಡಿಂಗ್ ಯಶಸ್ಸಿನ ನಂತರ, ನಾಯರ್ ರೀಸ್ ಅಭಿನಯದ ಠಾಕ್ರೆಯವರ ವ್ಯಾನಿಟಿ ಫೇರ್ ಕಾದಂಬರಿಯನ್ನು ಜೂಲಿಯಾನ್ ಫೆಲೋವೆಸ್ ಸಹಯೋಗದೊಂದಿಗೆ ನಿರ್ದೇಶಿಸಿದರು. ಇದೇ ಸಮಯದಲ್ಲಿ ಅವರು ಈಸ್ಟ್ ಆಫ್ರಿಕನ್ನರು ಮತ್ತು ದಕ್ಷಿಣ ಏಷ್ಯನ್ನರಿಗೆ ಸಿನಿಮಾ ನಿರ್ಮಾಣವನ್ನು ತಿಳಿಸಿಕೊಡಲು ಮೈಶಾ ಪ್ರಯೋಗಾಲಯವನ್ನು ಸ್ಥಾಪಿಸಿದರು. ಮೈಶಾದ ಮುಕ್ಯ ಕಛೇರಿ ಕಂಪಾಲಾ, ಉಗಾಂಡಾದಲ್ಲಿದೆ. ಅದೇ ವರ್ಷ ಅವಳು ಹ್ಯಾರಿ ಪಾಟರ್ ಮತ್ತು ಹೀಗೆ ಫೀನಿಕ್ಸ್ ಆರ್ಡರ್ ನಿರ್ದೇಶಿಸುವ ಅವಕಾಶವನ್ನು ನಿರಾಕರಿಸಿದರು. ನಾಯರ್‌ರವರ ಮುಂದಿನ ಚಿತ್ರ, ದಿ ನೇಮ್ಸೇಕ್, ೨೦೦೬ ರಲ್ಲಿ ಡಾರ್ಟ್ಮೌತ್ ಕಾಲೇಜ್ ನಲ್ಲಿ ಡಾರ್ಟ್ ಮೌತ್ ಫಿಲ್ಮ್ ಪ್ರಶಸ್ತಿಯೊಂದಿಗೆ ಪ್ರದರ್ಶಿಸಲಾಯಿತು. ಮತ್ತೊಂದು ಪ್ರಯೋಗ ಇದೇ ವರ್ಷ ನ್ಯೂಯಾರ್ಕ್ನ ಇಂಡೋ ಅಮೆರಿಕನ್ ಆರ್ಟ್ಸ್ ಕೌನ್ಸಿಲ್‌ನಲ್ಲಿ ನಡೆಯಿತು. ಪುಲಿಟ್ಜರ್ ಪ್ರಶಸ್ತಿ ವಿಜೇತ ಝುಂಪಾ ಲಾಹಿರಿ ಅವರ ಕಾದಂಬರಿಯನ್ನು ಆಧರಿಸಿ ಸೂನಿ ತಾರಾಪೊರೆವಾಲಾ ಅವರ ಚಿತ್ರಕಥೆಯೊಂದಿಗೆ ನೇಮ್ಸೇಕ್ ಸಿನಿಮಾ ಮಾರ್ಚ್ ೨೦೦೭ ರಲ್ಲಿ ಬಿಡುಗಡೆ ಮಾಡಲಾಯಿತು. ಅದೇ ವರ್ಷ ಅವರ ಚಿತ್ರರಂಗದ ಸಾಧನೆಗೆ ಬಾಲಿವುಡ್ ಮೂವೀ ಅವಾರ್ಡ್ಸ್ನಲ್ಲಿ ಭಾರತ ಪ್ರೈಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಂದೆ ಆಕೆ, ನ್ಯೂಯಾರ್ಕ್ ಹಸಿ-ಬಿಸಿ ಪ್ರೀತಿ ಕಥೆಗಳನ್ನು ಆಧರಿಸಿ ನ್ಯೂಯಾರ್ಕ್ ಐ ಲವ್ ಯೂ ಸಿನಿಮಾ ನಿರ್ದೆಶಿಸಿದರು, ಇದು ನ್ಯೂಯಾರ್ಕನ ಒಂದು ಪ್ರಣಯ-ನಾಟಕ ಸಂಕಲನ ಮತ್ತು ಏಡ್ಸ್ ಜಾಗೃತಿ (ಗೇಟ್ಸ್ ಫೌಂಡೇಶನ್ ನಿಧಿಯಿಂದ)ಯ ಮೇಲಿನ ೧೨ ನಿಮಿಷದ ಸಣ್ಣ ಚಲನಚಿತ್ರವಾಗಿದೆ. ಅವರ ಜೀವನ ಚರಿತ್ರೆ ಆಧಾರಿತ ಅಮೆಲಿಯಾ ಚಿತ್ರವು ಅಕ್ಟೋಬರ್ ೨೦೦೯ ರಲ್ಲಿ ಬಿಡುಗಡೆ ಮಾಡಲಾಯಿತು. ಹೀಗೆ ಅನೇಕ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಮಿರಾ ನಾಯರ್‌ರವರದ್ದು. ಚಲನಚಿತ್ರಗಳ ಪಟ್ಟಿ ಜಾಮಾ ಸ್ಟ್ರೀಟ್ ಮಸ್ಜಿದ್ ಜರ್ನಲ್ (೧೯೭೯) ಸೋ ಫಾರ್ ಭಾರತ ಗೆ (೧೯೮೨) ಭಾರತ ಕ್ಯಾಬರೆ ಅಚಿ (೧೯೮೫) ಎ ಡಿಸೈರ್ಡ್ ಸೆಕ್ಸ್ ? ಚಿಲ್ಡ್ರನ್ (೧೯೮೭) ಸಲಾಮ್ ಬಾಂಬೆ! (೧೯೮೮) ಮಿಸ್ಸಿಸ್ಸಿಪ್ಪಿ ಮಸಾಲಾ (೧೯೯೧) ಡೇ ಮೆರ್ಸಿಡೀಸ್ ಬಿಕಮ್ ಎ ಹ್ಯಾಟ್ (೧೯೯೩) ಪೆರೆಜ್ ಫ್ಯಾಮಿಲಿ (೧೯೯೫)

No comments:

Post a Comment